ತಮಿಳುನಾಡು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿನಿಯಾದ ಕುಮಾರಿ ಮೇಧಾ ಸಾವಿತ್ರಿಯವರು ದಿನಾಂಕ 19 ಜುಲೈ 2025ರಂದು ತಮಿಳುನಾಡಿನ ಕರೂರು ಜಿಲ್ಲೆಯ ನಾರದ ಗಾನ ಸಭಾ (ರಿ.) ಇದರ 81ನೇ ವರ್ಷದ ಸಲುವಾಗಿ ನಡೆಸಿದ ಜಿಲ್ಲಾ ಮಟ್ಟದ ಜೂನಿಯರ್ ವಿಭಾಗದ ಭರತನಾಟ್ಯ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಮೇಧಾರವರು ವಿದ್ವಾನ್ ದೀಪಕ್ ಕುಮಾರ್ ಹಾಗೂ ಅವರ ಶಿಷ್ಯೆ ವಿದುಷಿ ಅಪೂರ್ವಗೌರಿಯವರಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಇವರು ಕರೂರಿನ ಶ್ರೀ ಮಹೇಶ್ ಉಪಾಧ್ಯಾಯ ಮತ್ತು ಶ್ರೀಮತಿ ಅಕ್ಷತಾ ಮಹೇಶ್ ರವರ ಪುತ್ರಿ ಹಾಗೂ ಕಬಕದ ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀ ಶ್ಯಾಮ್ ಭಟ್ ಕೂವೆತ್ತಿಲರವರ ಮೊಮ್ಮಗಳು. ಮೇಧಾರವರ ತಾಯಿ ಶ್ರೀಮತಿ ಅಕ್ಷತಾ ಮಹೇಶ್ ರವರೂ ಕೂಡ ಭರತನಾಟ್ಯ ಕಲಾವಿದೆಯಾಗಿತ್ತು ಭರತನಾಟ್ಯದಲ್ಲಿ ವಿದ್ವತ್ ಪೂರ್ವ ಪರೀಕ್ಷೆಯವರೆಗೆ ವಿದ್ವಾನ್ ದೀಪಕ್ ಕುಮಾರ್ ರವರಲ್ಲಿಯೇ ಭರತನಾಟ್ಯ ಕಲಿತಿದ್ದಾರೆ.