ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಿಲಾಗ್ರಿಸ್ ಕಾಲೇಜ್, ಹಂಪನಕಟ್ಟೆ ಮಂಗಳೂರು, ಆಂತರಿಕ ಗುಣಮಟ್ಟ ಖಾತರಿ ಕೋಶ, ಕನ್ನಡ ವಿಭಾಗದ ಸಹಯೋಗದೊಂದಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕ್ ಇವರ ಕವಿ ಕಾವ್ಯ ಸಾಹಿತ್ಯ – ಪರಂಪರೆಯ ಮಾಲಿಕೆ 5 ಕಾರ್ಯಕ್ರಮವು ದಿನಾಂಕ 7 ಆಗಸ್ಟ್ 2025ರ ಗುರುವಾರ ಅಪರಾಹ್ನ ಘಂಟೆ 2:00ರಿಂದ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ನಡೆಯಲಿದೆ.
ದ. ಕ. ಜಿಲ್ಲಾ ಕ. ಸಾ. ಪ. ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಿಲಾಗ್ರಿಸ್ ಕಾಲೇಜು ಇದರ ಪ್ರಾಂಶುಪಾಲರಾದ ರೆ. ಡಾ. ಅಶ್ವಿನ್ ಸೆರವೊ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕ. ಸಾ. ಪ. ಬೆಂಗಳೂರಿನ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಮಾಧವ ಎಂ. ಕೆ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಮಿಲಾಗ್ರಿಸ್ ಕಾಲೇಜ್ ಮಂಗಳೂರು ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸೌಮ್ಯ ಕೋಟ್ಯಾನ್ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕರಾದ ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.
Subscribe to Updates
Get the latest creative news from FooBar about art, design and business.
ಮಿಲಾಗ್ರಿಸ್ ಕಾಲೇಜಿನಲ್ಲಿ ಕವಿ, ಕಾವ್ಯ, ಸಾಹಿತ್ಯ,ಪರಂಪರೆಯ – ಮಾಲಿಕೆ 5 | ಆಗಸ್ಟ್ 07
No Comments1 Min Read
Previous Articleಮಂಗಳೂರು ವಿ. ವಿ. ಯಲ್ಲಿ ‘ಯಕ್ಷಾಯಣ ದಾಖಲೀಕರಣ’ದ 8ನೇ ಕಾರ್ಯಕ್ರಮ
Next Article ಅಂಕಣ ಬರಹಗಾರ ಮರವಂತೆ ಪ್ರಕಾಶ್ ಪಡಿಯಾರ್ ನಿಧನ