ಬೆಂಗಳೂರು : ಸ್ವರತರಂಗ್ ಸಂಗೀತ ಅಕಾಡೆಮಿ (ರಿ.) ಪ್ರಸ್ತುತ ಪಡಿಸುವ ಸಂಗೀತ್ ಅರ್ಚನಾ – ಸಂತೂರ್ ವಾದನ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಗಿರಿನಗರದಲ್ಲಿರುವ ದೇವಕೃಪಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಧಾರವಾಡದ ಸಿತಾರ್ ವಾದಕ ಉಸ್ತಾದ್ ಶಫೀಕ್ ಖಾನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗುರುರಾಜ್ ಜೋಶಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ನವದೆಹಲಿಯ ಡಾ. ಬಿಪುಲ್ ಕುಮಾರ್ ರಾಯ್ ಇವರ ಸಂತೂರ್ ವಾದನಕ್ಕೆ ಬೆಂಗಳೂರಿನ ಕಾರ್ತಿಕ್ ಕೃಷ್ಣ ತಬಲಾ ಸಾಥ್ ನೀಡಲಿದ್ದಾರೆ.