ಬೆಂಗಳೂರು : ಬಿಲ್ಲವ ಅಸೋಸಿಯೇಶನ್ ಬೆಂಗಳೂರು (ರಿ.) ಇದರ ಸುವರ್ಣ ಸಂಭ್ರಮ 2025ರ ಪ್ರಯುಕ್ತ ‘ಯಕ್ಷ ಹಾಸ್ಯ ರಸ’ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2025ರಂದು ಬೆಂಗಳೂರಿನ ವೈಟ್ ಪೆಟಲ್ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಶಾಂತ್ ಸಿ.ಕೆ. ಸಾರಥ್ಯದಲ್ಲಿ ದಯಾನಂದ ಕೋಡಿಕಲ್ ಭಾಗವತಿಕೆ ಕನ್ನಡ ಹಾಸ್ಯ ಯಕ್ಷಗಾನ ಪ್ರಸ್ತುತಗೊಳ್ಳಲಿದ್ದು, ಆಚಾರ ವಿಚಾರ ಪುಸ್ತಕ – ಸ್ಮರಣ ಸಂಚಿಕೆ ಬಿಡುಗಡೆ, ಜಾನಪದ ಕಲರವ, ಕಲಿವಲಿ ಕಾಮಿಡಿ, ಕಿಲಾಡಿ ದರ್ಬಾರ್, ಮನಮೋಹಕ ನೃತ್ಯ, ಆಹಾರ ಮಳಿಗೆ, ಸ್ತಬ್ಧ ಚಿತ್ರ ಪ್ರದರ್ಶನ, ಗೊಂಬೆ ಪ್ರದರ್ಶನ ನಡೆಯಲಿದೆ.