ಧಾರವಾಡ : ಬೆಳಗಾವಿಯ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ.) ಕರ್ನಾಟಕ ಇದರ ವತಿಯಿಂದ ‘ರಾಷ್ಟ್ರೀಯ ಜಾನಪದ ಲೋಕೋತ್ಸವ’ ಹಾಗೂ ‘ನ್ಯಾಶನಲ್ ಅಚಿವ್ಮೆಂಟ್ ಗ್ಲೋಬಲ್ ಅವಾರ್ಡ್’ ಪ್ರದಾನ ಸಮಾರಂಭವು ದಿನಾಂಕ 10 ಆಗಸ್ಟ್ 2025ರಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಳೆದ ಎಂಟು ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಚಾಪು ಮೂಡಿಸಿ ಜನಮನ ಗಳಿಸಿದೆ. ಆದ್ದರಿಂದ ಇದೀಗ ಧಾರವಾಡದಲ್ಲಿ ಜರಗುವ ರಾಷ್ಟ್ರೀಯ ಜಾನಪದ ಲೋಕೋತ್ಸವ ಕಾರ್ಯಕ್ರಮಕ್ಕೆ ಸಾಧಕರಿಗೆ ಕರೆ ನೀಡಿ ಕಲೆ, ಸಾಹಿತ್ಯ, ಸಂಗೀತ, ಸಾಮಾಜಿಕ, ವೈದ್ಯಕೀಯ, ಕ್ರೀಡೆ, ಪತ್ರಿಕೋದ್ಯಮ, ಧಾರ್ಮಿಕ, ವೈಜ್ಞಾನಿಕ, ರಂಗಭೂಮಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಸಾಧಕ ಪ್ರತಿಭೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಸಿದ್ರಾಮ ಮಾ. ನಿಲಜಗಿ 9611694804 ಇವರನ್ನು ಸಂಪರ್ಕಿಸಿರಿ.