ಮೂಡುಬಿದಿರೆ: ಜೈನ ಪುರಾಣಗಳನ್ನು ಆಧರಿಸಿ ಕಾದಂಬರಿ ಸ್ವರೂಪದಲ್ಲಿ ರಚಿಸಿದವರಲ್ಲಿ ಪ್ರಥಮರೆನಿಸಿದ ಧಾರಿಣಿ ದೇವಿ’ ಕಾವ್ಯನಾಮಾಂಕಿತ ಸಾಹಿತಿ, ವಿಮರ್ಶಕಿ, ದಿವಂಗತ ಎಸ್. ಜೆ.ಪ್ರಭಾಚಂದ್ರ ಅವರ ಪತ್ನಿ ಎಸ್. ಪಿ. ಶಾಂತಮ್ಮ ಇವರು ದಿನಾಂಕ 7 ಆಗಸ್ಟ್ 2025ರಂದು ಬೆಂಗಳೂರಿನಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು. ಇವರಿಗೆ 95 ವರ್ಷ ವಯಸ್ಸಾಗಿತ್ತು.
ಮೂಲತಃ ಶಿವಮೊಗ್ಗ ಜಿಲೆಯ ಹೊಸನಗರದವರಾದ ಶಾಂತಮ್ಮ ಅವರು ಅಂಜನಾ, ಚಂದನಾ, ಭವದತ್ತಾ, ಭಗವಾನ್ ಮಹಾವೀರ ಮುಂತಾದ ಕಾದಂಬರಿಗಳು, ‘ಬೆಳ್ಳಿ ಬೆಟ್ಟದಂಗಳಿದಲ್ಲಿ ಮುಂತಾದ ಪ್ರವಾಸ ಕೃತಿಗಳು, ‘ಅಣ್ಣನ ಹಾಡುಗಳು’ ಸಹಿತ 4 ಕೃತಿಗಳನ್ನು ಇವರು ರಚಿಸಿದ್ದಾರೆ. ಶ್ರೀಗೊಮ್ಮಟೇಶ್ವರ ಪ್ರಶಸ್ತಿ ಸ್ವೀಕರಿಸಿದ ಮೊದಲಿಗರಾದ ಶಾಂತಮ್ಮ ಅವರು ಇತರ ಹತಾರು ಪ್ರಶಸಿಗಳನ್ನು ಪಡೆದಿದ್ದಾರೆ. ನಾಡಿನಾದ್ಯಂತ ಉಪನ್ಯಾಸ ನೀಡಿರುವ ಇವರು 4 ಬಾರಿ ಅಮೆರಿಕ ಪ್ರವಾಸ ನಾಡಿದ್ದಾರೆ.
ಮೂಡುಬಿದಿರೆ ಶ್ರೀಧವಲಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಎಸ್. ಪಿ. ಅಜಿತ್ ಪ್ರಸಾದ್ ಸಹಿತ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.
Subscribe to Updates
Get the latest creative news from FooBar about art, design and business.
Next Article ಕಾಸರಗೋಡಿನಲ್ಲಿ ‘ಮಂದಾರ ರಾಮಾಯಣ’ ಸುಗಿವು- ದುನಿವು