ಬಂಟ್ವಾಳ : ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ತುಳುನಾಡಿನ ಯುವ ನಾಟಕಕಾರ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಕುಡ್ಮಣಿ ನಿವಾಸಿಯಾಗಿರುವ ನಾರಾಯಣ ಕೊಯಿಲ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 08 ಆಗಸ್ಟ್ 2025ರ ಶುಕ್ರವಾರ ನಿಧನರಾದರು. ಇವರಿಗೆ 35 ವರ್ಷ ವಯಸ್ಸಾಗಿತ್ತು.
ವೃತ್ತಿಯಲ್ಲಿ ಮೇಸ್ತ್ರಿ ಕೆಲಸಗಾರರಾಗಿದ್ದ ನಾರಾಯಣರು ಕುಟುಂಬದ ಏಕೈಕ ಜೀವನಾಧಾರವಾಗಿದ್ದರು. ಪ್ರತಿಭಾನ್ವಿತ ಬರಹಗಾರರಾಗಿದ್ದ ನಾರಾಯಣರು 12 ಕ್ಕೂ ಹೆಚ್ಚು ತುಳು ನಾಟಕಗಳನ್ನು ಬರೆದಿದ್ದಾರೆ. ಇವರ ‘ಪಂಡ ಕೆನುಜೆರ್’ ನಾಟಕ ಪ್ರಶಸ್ತಿ ಗಳಿಸಿದ್ದು, ನೂರಕ್ಕೂ ಹೆಚ್ಚು ಬಾರಿ ಪ್ರದರ್ಶನ ಕಂಡಿದೆ. ವಿವಿಧ ದೈವ, ದೇವಸ್ಥಾನಗಳ ತುಳು ಕನ್ನಡ ಭಕ್ತಿಗೀತೆ, ಜಾನಪದ ಗೀತೆ ರಚಿಸಿದ್ದು ಅವು ಧ್ವನಿ ಮುದ್ರಣಗೊಂಡಿದೆ. ಇವರು ವಿವಿಧ ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು.
Subscribe to Updates
Get the latest creative news from FooBar about art, design and business.
Previous Articleಕಾಸರಗೋಡಿನಲ್ಲಿ ‘ಮಂದಾರ ರಾಮಾಯಣ’ ಸುಗಿವು- ದುನಿವು
Next Article ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ