ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಮಂಗಳೂರು ತಾಲೂಕು ಸಮಿತಿಯ ಸಹಯೋಗದೊಂದಿಗೆ ವೀರ ರಾಣಿ ಅಬ್ಬಕ್ಕ 500ನೇ ಜನ್ಮವರ್ಷಾಚರಣೆಯ ಪ್ರಯುಕ್ತ ಲೇಖನ ಬರಹ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮೂರು ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.
ನಿಯಮಗಳು :
• ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದು.
• ರಾಣಿ ಅಬ್ಬಕ್ಕಳ ಕುರಿತಾಗಿ ಲೇಖನವನ್ನು ಬರೆಯಬೇಕು.
• ಲೇಖನವು ಕನಿಷ್ಠ 800 ಗರಿಷ್ಟ 1500 ಪದಗಳನ್ನು ಹೊಂದಿರಬೇಕು.
• 30 ಸೆಪ್ಟೆಂಬರ್ 2025 ಲೇಖನ ಕಳಿಸಿಕೊಡಲು ಕೊನೆಯ ದಿನಾಂಕವಾಗಿರುತ್ತದೆ.
• ಲೇಖನವನ್ನು ನುಡಿ ಅಥವಾ ಯುನಿಕೋಡ್ ನಲ್ಲಿ ಟೈಪ್ ಮಾಡಿ ವರ್ಡ್ ಮತ್ತು ಪಿ.ಡಿ.ಎಫ್. ಎರಡೂ ರೂಪದಲ್ಲಿ ಕಳುಹಿಸಿಕೊಡಬೇಕು.
• ಲೇಖನವು ಇಲ್ಲಿಯವರೆಗೆ ಯಾವುದೇ ರೂಪದಲ್ಲಿ ಪ್ರಕಟವಾಗಿರಬಾರದು.
• ಲೇಖನದ ಕೊನೆಯಲ್ಲಿ ಕಡ್ಡಾಯವಾಗಿ ಆಕರಗಳನ್ನು ತಿಳಿಸಬೇಕು.
• ಪ್ರತ್ಯೇಕ ಪುಟದಲ್ಲಿ ಹೆಸರು, ಕಾಲೇಜು, ಫೋನ್ ನಂಬರ್ ಮತ್ತು ಕಾಲೇಜು ಐಡಿ ಲಗತ್ತಿಸಿ ಕಳುಹಿಸಬೇಕು.
• ಲೇಖನವನ್ನು ಒಂದು ಬಾರಿ ಕಳುಹಿಸಿದ ನಂತರ ಬಹುಮಾನ ಘೋಷಣೆ ಆಗುವವರೆಗೆ ಪ್ರಕಟಣೆಗೆ ಅವಕಾಶ ಇರುವುದಿಲ್ಲ.
• ಲೇಖನಗಳನ್ನು [email protected]ಗೆ ಮಿಂಚಂಚೆಯ (email) ಮೂಲಕ ಕಳುಹಿಸಿಕೊಡಬೇಕು.
• ಹೆಚ್ಚಿನ ಮಾಹಿತಿಗಾಗಿ : 8792364258 ಮತ್ತು 9483105059