ಸುಳ್ಯ : ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದರ ಸಂಸ್ಕೃತ ಸಂಘದ ವತಿಯಿಂದ ಸಂಸ್ಕೃತ ಸಪ್ತಾಹವು ದಿನಾಂಕ 05 ಆಗಸ್ಟ್ 2025ರಿಂದ 11 ಆಗಸ್ಟ್ 2025ರವರೆಗೆ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 05 ಆಗಸ್ಟ್ 2025ರಂದು ಕಾಲೇಜಿನ ಪ್ರಾಂಶುಪಾಲಾರಾದ ಡಾ. ಲೀಲಾಧರ್ ಡಿ.ವಿ.ಯವರು ಸಂಸ್ಕೃತ ಪತ್ರದ ಅಂಚೆಪೆಟ್ಟಿಗೆ ಅನಾವರಣಗೊಳಿಸುವ ಮೂಲಕ ನೆರವೇರಿಸಿದರು. ಒಂದು ವಾರಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿಗಳಿಗೆ ಸಂಸ್ಕೃತ ಸಮೂಹ ಗಾಯನ, ಸಂಸ್ಕೃತ ಲೇಖನ ಪತ್ರ, ಸಂಸ್ಕೃತ ಪ್ರಬಂಧ ಹಾಗೂ ಸಂಸ್ಕೃತ ವೀಡಿಯೊ ಬ್ಲಾಗಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಂಗವಾಗಿ ವಿಧ್ಯಾರ್ಥಿಗಳು ಸಾರ್ವಜನಿಕರಲ್ಲಿ ಸಂಸ್ಕೃತ ಭಾಷೆಯ ಜಾಗೃತಿ ಮೂಡಿಸುವ ಸಲುವಾಗಿ ಕಾಲೇಜಿನ ವಠಾರದಲ್ಲಿ ಬೀದಿ ನಾಟಕವನ್ನು ನಡೆಸಿದರು. ದಿನಾಂಕ 08 ಆಗಸ್ಟ್ 2025ರಂದು ಸಂಸ್ಕೃತ ಸಪ್ತಾಹದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಸ್ಕೃತ ಜಾಗರಣಾ ಕಾರ್ಯಕ್ರಮವು ಪಯಸ್ವಿನಿ ಪ್ರೌಢ ಶಾಲೆ ಜಾಲ್ಸೂರು ಹಾಗೂ ಸುಳ್ಯ ಮಿತ್ತಡ್ಕದ ರೋಟರಿ ಪ್ರೌಢಶಾಲೆಯಲ್ಲಿ ಬೀದಿ ನಾಟಕದ ಮೂಲಕ ನೆರವೇರಿಸಿದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 11 ಆಗಸ್ಟ್ 2025 ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ನೆರವೇರಿತು. ಕಾಲೇಜಿನ ಮೆಡಿಕಲ್ ಆಫೀಸರ್ ಡಾ. ಸನತ್ ಕುಮಾರ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಕೃತ ಸಪ್ತಾಹವು ಸುಂದರವಾದ ಕಾರ್ಯಕ್ರಮ, ಇಂತಹ ಜಾಗರಣಾ ಕಾರ್ಯಕ್ರಮವು ಇನ್ನು ಹೆಚ್ಚು ಹೆಚ್ಚು ಹೆಚ್ಚು ನಡೆಯುತ್ತಿರಲಿ ಎಂದು ಆಶಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವೇಕಾನಂದ ವಿದ್ಯಾ ಸಂಸ್ಥೆ ವಿನೋಬನಗರ ಇದರ ಶಿಕ್ಷಕರಾದ ಶ್ರೀ ಶ್ರೀವರ ಕೆ.ವಿ.ಯವರು ಮಾತನಾಡುತ್ತಾ ಆಯುರ್ವೇದದಲ್ಲಿ ಸಂಸ್ಕೃತದ ಪಾತ್ರ ಹಾಗೂ ಅದರ ಮಹತ್ವವನ್ನು ವಿಧ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ವಿನಯ್ ಶಂಕರ್ ಭಾರದ್ವಾಜ್, ಸಂಹಿತಾ ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ. ಶ್ರೀಜ ಎಸ್. ಹಾಗೂ ಸಂಸ್ಕೃತ ಸಂಘದ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ದೇರ್ಲಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕುಮಾರಿ ನೀಲಿಮಾ ಮತ್ತು ಬಳಗ ಪ್ರಾರ್ಥಿಸಿ, ಸಂಹಿತಾ ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ. ಶ್ರೀಜ ಸ್ವಾಗತಿಸಿ, ಸಂಹಿತ ಸಿದ್ಧಾಂತ ವಿಭಾಗ ಪ್ರಾದ್ಯಾಪಕರಾದ ಡಾ. ವಿಷ್ಣು ಕೃಷ್ಣನ್ ಇವರು ವಂದಿಸಿ, ವಿದ್ಯಾರ್ಥಿಗಳಾದ ಧ್ಯಾನ ವಿಜಯ್ ಹಾಗೂ ಮಾನ್ಯ ಅಂಬೆಕಲ್ಲು ನಿರೂಪಿಸಿದರು.