ಬೆಂಗಳೂರು : ನಾಟ್ಯ ಸಂಪದ ಕಲಾ ಶಾಲೆಯ ಚತುರ್ಥ ವಾರ್ಷಿಕೋತ್ಸವ ಪ್ರಯುಕ್ತ ನಾಟ್ಯಸಂಪದ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 15 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ರಾಜೇಶ್ವರಿ ವಿದ್ಯಾ ಶಾಲೆಯಲ್ಲಿ ಆಯೋಜಿಸಲಾಗಿದೆ.
ಕವಿ ಜಿ.ಎಮ್. ಬರವಣಿ ವಿರಚಿತ ‘ಸುಂದೋಪಸುಂದ ಕಾಳಗ’ ಮತ್ತು ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ರುಕ್ಮಿಣಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.