ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ದಿನಾಂಕ 15 ಆಗಸ್ಟ್ 2025ರಂದು ‘ನೃತ್ಯ ದ್ವಯ’ ಮತ್ತು ನೃತ್ಯ ಸಿರಿ’ ಭರತನಾಟ್ಯ ಪ್ರದರ್ಶನವನ್ನು ಸಂಜೆ 7-30 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ‘ನೃತ್ಯ ದ್ವಯ’ ಮತ್ತು ಪುತ್ತೂರು ನಾಟ್ಯರಂಗ ಕಲಾವಿದೆಯರಿಂದ ‘ನೃತ್ಯ ಸಿರಿ’ ಭರತನಾಟ್ಯ ಪ್ರದರ್ಶನ ಪ್ರಸ್ತುತಗೊಳ್ಳಲಿದ್ದು, ವಿದ್ವಾನ್ ಸ್ವರಾಗ್ ಮಾಹೆ ಇವರ ಹಾಡುಗಾರಿಕೆಗೆ, ಎನ್. ದೆಬಾಶಿಶ್ ಕೊಲ್ಕತಾ ಇವರ ನಟುವಾಂಗ, ಬೆಂಗಳೂರಿನ ಗೌತಮ್ ಗೋಪಾಲಕೃಷ್ಣ ಮೃದಂಗದಲ್ಲಿ ಮತ್ತು ಕುಮಾರಿ ತನ್ಮಯಿ ಉಪ್ಪಂಗಳ ವಯಲಿನ್ ನಲ್ಲಿ ಸಹಕರಿಸಲಿದ್ದಾರೆ.