ಬಂಟ್ವಾಳ : ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಳೆ ಸೇವೆಯಲ್ಲಿ ದಿನಾಂಕ 02 ಆಗಸ್ಟ್ 2025ರಂದು ಶ್ರೀ ಮದವೂರ ವಿಘ್ನೇಶ ಕಲಾ ಸಂಘ, ಗೇರುಕಟ್ಟೆ, ಬೆಳ್ತಂಗಡಿ ಇದರ ಸದಸ್ಯರಿಂದ ‘ಸೀತಾಪಹಾರ’, ‘ವಾಲಿಮೋಕ್ಷ’ ಎಂಬ ಪ್ರಸಂಗದ ತಾಳಮದ್ದಳೆಯು ನಡೆಯಿತು.
ಹಿಮ್ಮೇಳದಲ್ಲಿ ಮಧೂರು ರಾಮಪ್ರಕಾಶ್ ಕಲ್ಲೂರಾಯ, ಶ್ರೀ ನಿತೀಶ್ ಮನೋಳಿತ್ತಾಯ, ಶ್ರೀ ಮಹೇಶ, ಶ್ರೀ ಅನಿಮೇಶ ಭಾಗವಹಿಸಿದರು. ಮುಮ್ಮೇಳದಲ್ಲಿ ಮಧೂರು ಸುಂದರ ಕೃಷ್ಣ, ಬಾಸಮೆ ನಾರಾಯಣ ಭಟ್, ಶ್ರೀ ದಿನೇಶ ಭಟ್ ಬಳೆಂಜ, ಶ್ರೀ ರಾಮಕೃಷ್ಣ ಭಟ್, ಶ್ರೀಮತಿ ಜಯಂತಿ ಸುರೇಶ ಹೆಬ್ಬಾರ್, ಶ್ರೀಮತಿ ಕೆ.ಆರ್. ಸುವರ್ಣ ಕುಮಾರಿ, ಮಧೂರು ಮೋಹನ ಕಲ್ಲೂರಾಯ ಪಾಲ್ಗೊಂಡರು. ಮಧೂರು ಮೋಹನ ಕಲ್ಲೂರಾಯರು ಸಂಯೋಜಿಸಿದ್ದರು. ಶ್ರೀ ನಾಗೇಂದ್ರ ಪೈ ಸ್ವಾಗತಿಸಿ. ವಂದಿಸಿದರು.