ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ಆಯೋಜಿಸುವ ಸಂಸ್ಕೃತಿ ಸಂಭ್ರಮದಲ್ಲಿ ಯಕ್ಷವರ್ಷ ಕಾರ್ಯಕ್ರಮದಡಿಯಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 17 ಆಗಸ್ಟ್ 2025ರಂದು ಸಂಜೆ 5-30 ಗಂಟೆಗೆ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಗುಂಡೂ ಸೀತಾರಾಮ ರಾವ್ ತಲವಾಟ ರಚಿತ ‘ಬರ್ಬರೀಕ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸರ್ವಶ್ರೀಗಳಾದ ರಾಘವೇಂದ್ರ ಮಯ್ಯ, ಭರತ್ ಚಂದನ್, ಸಚಿನ್ ಆಚಾರ್, ಕೊಂಡದಕುಳಿ ರಾಮಚಂದ್ರ ಹೆಗಡೆ, ಚಿಟ್ಟಾಣಿ ಕಾರ್ತಿಕ ಹೆಗಡೆ, ಸುಧೀರ ಉಪ್ಪೂರು, ಯೋಗೀಂದ್ರ ಮರವಂತೆ, ಪ್ರಶಾಂತ ಮಯ್ಯ ದಾರಿಮಕ್ಕಿ, ಪುರಂದರ ಮೂಡ್ಕಣಿ ಕಿರಾಡಿ ವಿಶ್ವನಾಥ ಮತ್ತು ಅನುಪ್ ಉರಾಳ ಇವರುಗಳು ಸಹಕರಿಸಲಿದ್ದಾರೆ.