ಮಂಗಳೂರು : ಸ್ವರೂಪ ಅಧ್ಯಯನ ಕೇಂದ್ರ (ರಿ.) ಮಂಗಳೂರು ಇದರ ವತಿಯಿಂದ ‘ಸ್ವರೂಪ ಟಿಪಿಕಲ್’ ‘ಸೃಜನಾತ್ಮಕ ಕಲಾ ಪ್ರದರ್ಶನ’ವನ್ನು ದಿನಾಂಕ 17 ಆಗಸ್ಟ್ 2025ರಂದು ಮಧ್ಯಾಹ್ನ 1-30 ಗಂಟೆಗೆ ಮಂಗಳೂರಿನ ಬಾವುಟಗುಡ್ಡೆ ಮಹಾತ್ಮ ಗಾಂಧಿ ಪ್ರತಿಷ್ಠಾನ ಟಾಗೋರ್ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಸೈಂಟ್ ಅಲೋಸಿಯಸ್ ಸ್ವಾಯತ್ತೆ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ರೆ.ಫಾ. ಪ್ರವೀಣ್ ಮಾರ್ಟಿಸ್ ಇವರು ಉದ್ಘಾಟನೆ ಮಾಡಿದ್ದು, ದ.ಕ. ಜಿಲ್ಲಾ ವಿದ್ವಾಂಗ ಉಪನಿರ್ದೇಶಕರಾದ ಜಿ.ಎಸ್. ಶಶಿಧರ್, ಗಾಂಧಿ ಪ್ರತಿಷ್ಠಾನದ ಉಪ ಕಾರ್ಯದರ್ಶಿಯಾದ ಎನ್.ಜಿ. ಮೋಹನ್, ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ.ಜಿ. ಆವುಟಿ, ಶ್ರೇಷ್ಟ ಚಿತ್ರ ಕಲಾವಿದರಾದ ಗಣೇಶ್ ಸೋಮಯಾಜಿ ಮತ್ತು ಕಲಾವಿದೆ ಶ್ವೇತಾ ಚಿತ್ರದುರ್ಗ ಇವರುಗಳು ಭಾಗವಹಿಸಲಿದ್ದಾರೆ.