ಉಡುಪಿ : ಸುಶಾಸನ ಪ್ರಸ್ತುತಿಯಡಿ ಕಿದಿಯೂರು ಹೊಟೇಲ್‌ನ ಶೇಷಶಯನ ಹಾಲ್ ನಲ್ಲಿ ದಿನಾಂಕ 15 ಆಗಸ್ಟ್ 2025ರಂದು ಜರಗಿದ ಸುಧಾಕರ ಆಚಾರ್ಯರ ಕಲಾರಾಧನೆಯ 35ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆಯಲ್ಲಿ ಶಿಕ್ಷಣ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಮೆಯವರನ್ನು ‘ತುಳುನಾಡ ಸುಶಾಸನ ಪುರಸ್ಕಾರ’ ಪ್ರದಾನ ಮಾಡಿ ಸಮ್ಮಾನಿಸಲಾಯಿತು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ. ಜಿ. ಶಂಕರ್ ಅವರು ದಾಮ್ಮೆಯವರನ್ನು ಗೌರವಿಸಿ ಶುಭಹಾರೈಸಿದರು. ಉದ್ಯಮಿ ವಿ.ಜಿ. ಶೆಟ್ಟಿ, ಸುಶಾಸನದ ಸುಧಾಕರ ಆಚಾರ್ಯ, ಅಮಿತಾ, ಮೇದಿನಿ ಆಚಾರ್ಯ, ಆಚಾರ್ಯ ಯಾಸ್ಯ ಗೃತ್ಸ ಗೋವಿಂದ ಆಚಾರ್ಯ, ಡಾ. ಹರೀಶ್ ಜೋಷಿ, ರತನ್‌ರಾಜ್ ರೈ, ತ್ರಿಲೋಚನ ಶಾಸ್ತ್ರಿ ಉಪಸ್ಥಿತರಿದ್ದರು. ಪ್ರೊ. ಪವನ್ ಕಿರಣಕೆರೆ ಅಭಿನಂದನೆ ಭಾಷಣ ಮಾಡಿದರು. ‘ಯಾಜ್ಞಸೇನೆ’ ತಾಳಮದ್ದಳೆ, ಕಿರಿಯ ಹಿರಿಯ ಕಲಾವಿದರಿಂದ ‘ವೀರ ಅಭಿಮನ್ಯು’ ತೆಂಕು-ಬಡಗು ಕೂಡಾಟ ಪ್ರದರ್ಶನಗೊಂಡಿತು.