ಕಾಸರಗೋಡು : ಶ್ರೀಸ್ಕಂದ ಯಕ್ಷಗಾನ ಕೇಂದ್ರ ಪಾಯಿಚ್ಚಾಲು ಇಲ್ಲಿನ ಪುಟಾಣಿ ಕಲಾವಿದರಿಂದ ‘ಗಿರಿಜಾಕಲ್ಯಾಣ’ ಯಕ್ಷಗಾನ ಪ್ರದರ್ಶನ ದಿನಾಂಕ 13 ಆಗಸ್ಟ್ 2025ರಂದು ಶ್ರೀ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯದ ಅಂಗವಾಗಿ ಶ್ರೀ ಎಡನೀರು ಮಠದಲ್ಲಿ ನಡೆಯಿತು.
ನಾಟ್ಯಗುರು ರಂಜಿತ್ ಗೋಳಿಯಡ್ಕ ಇವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಚೆಂಡೆಯಲ್ಲಿ ಪೃಥ್ವಿಚಂದ್ರ ಶರ್ಮ ಪೆರುವಡಿ ಹಾಗೂ ಮದ್ದಳೆಯಲ್ಲಿ ಲವಕುಮಾರ್ ಐಲ, ಚಕ್ರತಾಳದಲ್ಲಿ ಅರ್ಪಿತ್ ಶೆಟ್ಟಿ, ವಸ್ತ್ರಾಲಂಕಾರದಲ್ಲಿ ರಾಕೇಶ್ ಗೋಳಿಯಡ್ಕ ಸಹಕರಿಸಿದರು. ಅರ್ಜುನ್ ಕೂಡ್ಲು, ಆಕಾಶ್ ಕೂಡ್ಲು, ಶ್ರೀವತ್ಸ, ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು, ಕೋಶಾಧಿಕಾರಿ ಮುರಳೀಧರ ಶೆಟ್ಟಿ, ಕಾರ್ಯದರ್ಶಿ ಕಿರಣ್ ಪಾಯಿಚ್ಚಾಲು ಸಹಕರಿಸಿದರು. ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಮಕ್ಕಳಿಗೆ ಗುರುಗಳು ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಪ್ರದರ್ಶನದಲ್ಲಿ ಕೇಂದ್ರದ 15ಮಕ್ಕಳು ಪಾತ್ರ ನಿರ್ವಹಿಸಿದರು.