ಕಾಸರಗೋಡು : ಶ್ರೀ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯದ ಅಂಗವಾಗಿ ‘ನೃತ್ಯದ್ವಯ’, ‘ನೃತ್ಯಸಿರಿ’ ಹಾಗೂ’ ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ದಿನಾಂಕ 15ಆಗಸ್ಟ್ 2025ರ ಶುಕ್ರವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಗೌತಮ ಕೃಷ್ಣ ದೇಂತಜೆ ಇವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನಕ್ಕೆ ವಯಲಿನ್ ನಲ್ಲಿ ಕುಮಾರಿ ಧನಾಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಶ್ರೀ ಆಶ್ಲೇಷ್ ಪಿ. ಎಸ್. ಸಹಕರಿಸಿದರು. ಬಳಿಕ ನಡೆದ ವಿದುಷಿ ಮಂಜುಳ ಸುಬ್ರಹ್ಮಣ್ಯ ಹಾಗೂ ವಿದ್ವಾನ್ ಶ್ರೀ ಮಂಜುನಾಥ್ ಎನ್. ಪುತ್ತೂರು ಇವರ ‘ನೃತ್ಯದ್ವಯ’ ಕಾರ್ಯಕ್ರಮ ಕಲಾರಸಿಕರಿಗೆ ಹೊಸ ಅನುಭೂತಿಯನ್ನು ನೀಡಿತು. ಕಾರ್ಯಕ್ರಮದ ಅಂತ್ಯದಲ್ಲಿ ನಾಟ್ಯರಂಗ ಪುತ್ತೂರು ಇಲ್ಲಿನ ಕಲಾವಿದರಿಂದ ‘ನೃತ್ಯಸಿರಿ’ ಭರತನಾಟ್ಯ ಪ್ರದರ್ಶನ ನಡೆಯಿತು. ಇವರಿಗೆ ಹಾಡುಗಾರಿಕೆಯಲ್ಲಿ ವಿದ್ವಾನ್ ಸ್ವರಾಗ್ ಮಾಹೆ, ನಾಟುವಾಂಗದಲ್ಲಿ ಕೋಲ್ಕತ್ತಾದ ಎನ್. ದೆಬಾಶಿಶ್, ಮೃದಂಗದಲ್ಲಿ ಬೆಂಗಳೂರಿನ ಗೌತಮ್ ಗೋಪಾಲಕೃಷ್ಣ ಹಾಗೂ ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಸಹಕರಿಸಿದರು.