ಮಂಗಳೂರು : ಮಂಗಳೂರು ಸಂಸ್ಕೃತ ಸಂಘ ಹಾಗೂ ಸರೋಜಿನೀ ಮಧುಸೂದನ ಕುತೆ ಶಿಕ್ಷಣ ಸಂಸ್ಥೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ದಿನಾಂಕ 23 ಆಗಸ್ಟ್ 2025ರ ಶನಿವಾರ ಮಧ್ಯಾಹ್ನ 2-00 ಗಂಟೆಗೆ ಮಂಗಳೂರಿನ ಅತ್ತಾವರದ ಸರೋಜಿನೀ ಮಧುಸೂದನ ಕುಶೆ ಪ್ರ.ಪೂ. ವಿದ್ಯಾಲಯದಲ್ಲಿ ‘ಸಂಸ್ಕೃತೋತ್ಸವ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ.
ಸಂಸ್ಕೃತೋತ್ಸವದ ಅಂಗವಾಗಿ ವಿವಿಧ ಸಂಸ್ಕೃತ ಸ್ಪರ್ಧೆಗಳ ಅಧ್ಯಕ್ಷತೆಯನ್ನು ಸಂಸ್ಕೃತ ಸಂಘದ ಗೌರವಾಧ್ಯಕ್ಷ ಕೆ.ಪಿ. ವಾಸುದೇವ ರಾವ್ ಇವರು ವಹಿಸಲಿದ್ದು, ಶ್ರೀಮತಿ ಸರೋಜಿನೀ ಮಧುಸೂದನೆ ಕುಶೆಯವರು ಸ್ಪರ್ಧೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಮಂಗಳೂರು ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕರು ಶ್ರೀ ಸೂರ್ಯನಾರಾಯಣ ಭಟ್ಟ ಇವರು ಪ್ರಧಾನ ಭಾಷಣ ಮಾಡಲಿದ್ದಾರೆ ಹಾಗೂ ಸರೋಜಿನೀ ಮಧುಸೂದನ ಕುಶೆ ಪ.ಪೂ. ವಿದ್ಯಾಲಯದ ಪ್ರಾಚಾರ್ಯರು ಶ್ರೀ ಬಿಂದುಸಾರ ಶೆಟ್ಟಿ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2-30 ಗಂಟೆಗೆ ಮಂಗಳೂರು ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಸ್ಕೃತ ಸ್ತೋತ್ರ ಕಂಠಪಾಠ, ಸುಭಾಷಿತ ಕಂಠಪಾಠ, ಏಕಪಾತ್ರಾಭಿನಯ, ಸಮೂಹಗಾನ ಸ್ಪರ್ಧೆ, ಸಮೂಹ ನೃತ್ಯ, ಸಂಸ್ಕೃತ ರಸಪ್ರಶ್ನೆ ಸ್ಪರ್ಧೆ ಹಾಗೂ ಸಂಸ್ಕೃತ ಭಾಷಣ ಸ್ಪರ್ಧೆ ಜರುಗಲಿದೆ. ಸಾಯಂಕಾಲ 4-00 ಗಂಟೆಗೆ ಸದ್ಬೋಧ ಗುರುಕುಲದ ಸಂಸ್ಕೃತ ಭಾಷಾಭ್ಯಾಸ ಕಲಿಕೆಯ ಮಕ್ಕಳಿಂದ ವಿಶೇಷ ಸಂಸ್ಕೃತ ಕಾರ್ಯಕ್ರಮ ಜರುಗಲಿದೆ.
ಸಂಜೆ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಸಿದ್ಧ ಜ್ಯೋತಿಷಿ ವಿದ್ವಾನ್ ರಂಗ ಐತಾಳ ಕದ್ರಿ ಮಂಗಳೂರು ಇವರು ಅಧ್ಯಕ್ಷತೆಯನ್ನು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಸಂಸ್ಕೃತ ಭಾರತೀ ಮಂಗಳೂರು ಉಪಾಧ್ಯಕ್ಷರಾದ ಶ್ರೀಮತಿ ಭಾರತೀ ಸೊರಕೆ ಮತ್ತು ಸರೋಜಿನಿ ಮಧುಸೂದನ ಕುಶೆ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಅಧಿಕಾರಿ ಶ್ರೀ ಮುರಳೀಧರ ರಾವ್ ಇವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಗಳೂರಿನ ಕರ್ನಾಟಕ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು ವಿದ್ವಾನ್ ಜನಾರ್ದನ ತಾಮಣ್ಯರಃ ಹಾಗೂ ಸುರತ್ಕಲ್ ಎನ್.ಐ.ಟಿ.ಕೆ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಸಂಸ್ಕೃತ ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ಟ ಇವರನ್ನು ಸನ್ಮಾನಿಸಲಾಗುವುದು.