ಬೆಂಗಳೂರು: ರಂಗಾಸ್ಥೆ ರಂಗ ತಂಡದವರು ತಮ್ಮ ಏಳನೇ ವರ್ಷದ ಸ್ಥಾಪಕ ದಿನಾಚರಣೆಯನ್ನು 22.04.2023ರ ಸಂಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸಿದರು. ಡಾ. ಚನ್ನೇಗೌಡ, ವಿಜಯವಾಣಿ ಪತ್ರಿಕಾ ಸಂಪಾದಕರು, ನಾಗೇಂದ್ರ ಶಾ, ಕನ್ನಡ ರಂಗಭೂಮಿಯ ಖ್ಯಾತ, ಜನಪ್ರಿಯ ನಟರು, ನಿರ್ದೇಶಕರು ಮತ್ತು ಹಿರಿಯ ವಿಮರ್ಶಕ ಗುಂಡಣ್ಣ ಚಿಕ್ಕಮಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಂಗಾಸ್ಥೆ ವತಿಯಿಂದ ಪ್ರತಿ ವರ್ಷದಂತೆ ರಂಗಭೂಮಿಯ ಹಿರಿಯ ರಂಗ ಸಂಘಟಕರಿಗೆ ಡಾಕ್ಟರ್ ಹೆಚ್. ನರಸಿಂಹಯ್ಯ ಗೌರವವನ್ನು ನೀಡಲಾಗುತ್ತದೆ. ಈ ಸಾಲಿನ ಗೌರವವನ್ನು ಹಿರಿಯ ಸಂಘಟಕರಾದ ಶ್ರೀ ಗಜಾನನ ಯುವಕ ಮಂಡಲ, ಶೇಷಗಿರಿಯ ಸನ್ಮಾನ್ಯ ಶ್ರೀ ಪ್ರಭು ಸಿದ್ದಪ್ಪ ಗುರಪ್ಪನವರು ಅವರಿಗೆ ನೀಡಲಾಯಿತು.
ನಂತರ ದಕ್ಷಿಣ ಭಾರತದ ರಾಜ್ಯಗಳ ರಂಗ ಸಂಗೀತ ಗಾಯನ ಕಾರ್ಯಕ್ರಮವನ್ನು ಯುತಿ-2023 ಹೆಸರಿನಲ್ಲಿ ಪ್ರಸ್ತುತ ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ತೆಲುಗು ಭಾಷೆಯನ್ನು ಪ್ರತಿನಿಧಿಸಲು ‘ನಿಭಾ ಥಿಯೇಟರ್’ ಸಂಘಟಿತ ವಾದ್ಯ ತಂಡ, ತಮಿಳು ಭಾಷೆಯನ್ನು ಪ್ರತಿನಿಧಿಸಲು ‘ತಿನಾಯ್ ನೀಲ ವಾಸಿಗಳ್’ ತಂಡ, ಮಲಯಾಳಂ ಭಾಷೆಯನ್ನು ಪ್ರತಿನಿಧಿಸಲು ‘ಜನಭೇರಿ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಪರ್ಫಾಮಿಂಗ್ ಸ್ಟಡೀಸ್’ ತಂಡ ಹಾಗೂ ಕನ್ನಡದಿಂದ ‘ರಂಗಾಸ್ಥೆ ತಂಡ’ದ ಸದಸ್ಯರು ವಿಶಿಷ್ಟ ರೀತಿಯ ರಂಗ ಸಂಗೀತವನ್ನು ಪ್ರಸ್ತುತಪಡಿಸಿದರು.
- ಗುಂಡಣ್ಣ ಚಿಕ್ಕಮಗಳೂರು