ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಸಂತ ಫಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆ ಬಿಜೈ ಇವರ ಜಂಟಿ ಆಶ್ರಯದಲ್ಲಿ 113ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ವನ್ನು ದಿನಾಂಕ 23 ಆಗಸ್ಟ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಮಂಗಳೂರಿನ ಬಿಜೈ ಸಂತ ಫಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬಿಜೈ ಸಂತ ಫಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಿರ್ಮಲ ಸಿಲ್ವಿಯ ಡಿ’ಸೋಜ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಶಿಕ್ಷಕಿ ಶ್ರೀಮತಿ ಗೀತಾ ಬಿ. ರೈ, ಹಿರಿಯ ಬರಹಗಾರರಾದ ಎನ್. ಸುಬ್ರಾಯ ಭಟ್ ಮತ್ತು ವಿಜಯ ಕರ್ಣಾಟಕದ ಚೀಫ್ ಕಾಪಿ ಎಡಿಟರ್ ಆರ್.ಸಿ. ಭಟ್ ಇವರುಗಳು ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಭಾಗವಹಿಸಲಿರುವರು.