ಬಂಟ್ವಾಳ : ಇಂಟಾಕ್ ಮಂಗಳೂರು ಅಧ್ಯಾಯ, ಎಚ್.ಇ.ಸಿ.ಎಸ್. ಇಂಟಾಕ್ ಮತ್ತು ಇಂಟಾಕ್ ಹೆರಿಟೇಜ್ ಕ್ಲಬ್, ಸರಕಾರಿ ಪ್ರೌಢಶಾಲೆ, ಮಂಚಿ ಇವರ ಸಹಯೋಗದಲ್ಲಿ ಶಂಕರ ಕೊರಗ ಗುತ್ತಕಾಡು ಮತ್ತು ಸುಪ್ರಿಯಾ ಇವರಿಂದ ಶಾಲಾ ಮಕ್ಕಳಿಗಾಗಿ ಒಂದು ದಿನದ “ಸಾಂಪ್ರದಾಯಿಕ ಬುಟ್ಟಿ ತಯಾರಿಕಾ ಕಾರ್ಯಾಗಾರ”ವನ್ನು ದಿನಾಂಕ 23 ಆಗಸ್ಟ್ 2025ರಂದು ಬೆಳಿಗ್ಗೆ 09-30ರಿಂದ ಸಂಜೆ 4-00ರವರೆಗೆ ಬಂಟ್ವಾಳ ತಾಲೂಕು ಮಂಚಿ ಕೊಳ್ಳಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೇಶ್ಮಾ ಶೆಟ್ಟಿ – 78992 31166 ಮತ್ತು ತಾರಾನಾಥ ಕೈರಂಗಳ – 98448 20979 ಸಂಖ್ಯೆಯನ್ನು ಸಂಪರ್ಕಿಸಿರಿ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಶಂಕರವರು ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬ ಊರಿನಲ್ಲಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕೊರಗ ಸಮುದಾಯದವರಾಗಿದ್ದು, ಸುಮಾರು 20 ವರುಷಗಳ ಹಿಂದೆ ಕಿನ್ನಿಗೋಳಿ ಪರಿಸರದಲ್ಲಿನ ಕೊರಗ ಮಹಿಳಾ ವಿವಿಧೋದ್ದೇಶ ಸಹಕಾರಿ ಸೊಸೈಟಿಯಲ್ಲಿ ಬುಟ್ಟಿ ತಯಾರಿಕೆಯಲ್ಲಿ ತರಬೇತುದಾರರಾಗಿ ಹಾಗೂ ವ್ಯಾಪಾರಿಯಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿರುತ್ತಾರೆ. ಸಿಬ್ಲ, ಹೂವಿನ ಬುಟ್ಟಿ, ಹೂದಾನಿ ಹಾಗೂ ವಿವಿಧ ವಿನ್ಯಾಸದ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವ ನೈಪುಣ್ಯತೆಯನ್ನು ಹೊಂದಿದ್ದು, ಬೆಂಗಳೂರು ಹಾಗೂ ಕಲ್ಕತಾದಲ್ಲಿ ತರಬೇತುದಾರರಾಗಿ ಕೆಲಸ ಮಾಡಿದ ಅನುಭವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಈಗಾಗಲೇ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳದ ಆಶ್ರಯದೊಂದಿಗೆ ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ, ಕೊರಗ ಮಹಿಳಾ ವಿವಿದೋದ್ದೇಶ ಸಹಕಾರಿ ಸೊಸೈಟಿಯಲ್ಲಿ ಹೊಸದಾಗಿ ಆರಂಭವಾಗಲಿರುವ ಬುಟ್ಟಿ ತಯಾರಿಕ ಘಟಕದಲ್ಲಿ ಕುಲಕಸುಬಿನ ತಯಾರಿಕೆಯ ತರಬೇತುದಾರರಾಗಿ ಆಯ್ಕೆಯಾಗಿರುತ್ತಾರೆ.