ಮಂಗಳೂರು : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ಣಾಟಕ ಇದರ ಮಹಾಸಭೆಯು ದಿನಾಂಕ 17 ಆಗಸ್ಟ್ 2025ರಂದು ಮೂಡಬಿದರೆ ಸಮಾಜ ಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಆಮಂತ್ರಣ ಪರಿವಾರದ ಜಿಲ್ಲಾಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು ಇವರು ವಹಿಸಿದ್ದರು.
ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಮಾತಾನಾಡಿ ಒಂದು ವರ್ಷದ ಕಾರ್ಯಕ್ರಮ ಪ್ರಗತಿ ಮತ್ತು ಎಲ್ಲಾ ಪದಾಧಿಕಾರಿಗಳ ಸರ್ವ ರೀತಿಯ ಸಹಕಾರವನ್ನು ನೆನೆದು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳ ನೂತನ ಸಮಿತಿ ರಚಿಸುವ ಬಗ್ಗೆ ಮಾತಾನಾಡಿ ಅಭಿಪ್ರಾಯ ಪಡೆಯಲಾಯಿತು. ಜಿಲ್ಲಾಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು ಮುಂದಿನ ಬದಲಾವಣೆ ಕುರಿತು ಒಪ್ಪಿಗೆ ಸೂಚಿಸಿ ಈವರೆಗೆ ಎಲ್ಲರೂ ತಮ್ಮ ಮನೆಯವರಂತೆ ಪ್ರೀತಿಯ ಸಹಕಾರವನ್ನು ಸ್ಮರಿಸಿ ಮುಂದೆಯ ಉತ್ತಮ ಸಹಕಾರ ನೀಡುವುದಾಗಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಅಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ನೂತನ ಅಧ್ಯಕ್ಷರಾಗಿ ಅನುಭವಿ ಸಾಹಿತಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿರುವ ವಿಂಧ್ಯಾ ಎಸ್. ರೈ ಕಡೇಶಿವಾಲಯ ಮತ್ತು ನೂತನ ಉಪಾಧ್ಯಕ್ಷರಾಗಿ ಉಪನ್ಯಾಸಕಿ ಹಾಗೂ ಸಾಹಿತಿ ಅನಿತಾ ಶೆಟ್ಟಿ ಮೂಡಬಿದ್ರೆ ಆಯ್ಕೆಯಾಗಿದ್ದಾರೆ. ವಿಂಧ್ಯಾ ಎಸ್. ರೈ ಈವರೆಗೆ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ಕರ್ನಾಟಕ ದ.ಕ. ಜಿಲ್ಲೆಯ ಉಪಾಧ್ಯಕ್ಷರಾಗಿದ್ದರು. ಅನಿತಾ ಶೆಟ್ಟಿ ಮೂಡುಬಿದಿರೆ ಆಮಂತ್ರಣ ತಾಲೂಕು ವೇದಿಕೆಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಆಯ್ಕೆಯ ಸಭೆಯಲ್ಲಿ ರಾಜ್ಯ ಪ್ರತಿನಿಧಿಗಳಾದ ಹೆಚ್.ಕೆ. ನಯನಾಡು, ಆಶಾ ಅಡೂರು, ಭಾರತಿ ಪರ್ಕಳ, ಜಿಲ್ಲಾ ನಿರ್ದೇಶಕರಾದ ಚೇತನ್ ಕುಮಾರ್ ಅಮೈ, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ವಿದ್ಯಾಶ್ರೀ ಅಡೂರು, ಬಂಟ್ವಾಳ ತಾಲೂಕು ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಮೂಡಬಿದ್ರೆ ತಾಲೂಕು ಅಧ್ಯಕ್ಷೆ ಕವಿತಾ ದಿನೇಶ್ ಕಟೀಲ್, ಕಾರ್ಯದರ್ಶಿ ಸುಶ್ಮಿತಾ ಆರ್., ಲೋಲಾಕ್ಷಿ ಶೆಟ್ಟಿ, ಪ್ರಕಾಶ್ ಆಚಾರ್ಯ, ಬಂಟ್ವಾಳ ಘಟಕದ ರೂಪೇಶ್ ಕುಮಾರ್, ರಾಕೇಶ್ ಪೊಳಲಿ, ಪ್ರಸಾದ್ ನಾಯಕ್ ಕಾರ್ಕಳ, ವಿಜಯಚಂದ್ರ ಮುಂಡ್ಲಿ, ಅನ್ನಪೂರ್ಣ ಶ್ಯಾನುಭೋಗ್ ಅಂಬಲಪಾಡಿ, ಅಕ್ಷತಾ ಅಡೂರು, ಸರೀನ್ ತಾಜ್ ಕಾಶಿಪಟ್ಟ, ದೀಕ್ಷಾ ಕಾಶಿಪಟ್ಟ ಭಾಗವಹಿಸಿದ್ದರು.