ಮೈಸೂರು: ‘ಆನ್ ಸ್ಟೇಜ್ ಯೂಥ್ ಥೀಯೇಟರ್’ ಅರ್ಪಿಸುವ 45 ದಿನಗಳ ‘ರಂಗ ತರಬೇತಿ ಕಾರ್ಯಾಗಾರ’ವು ಮೇ 14ರಿಂದ ಜೂನ್ 30ರವರಗೆ ಪ್ರತಿ ದಿನ ಸಂಜೆ 6:30ರಿಂದ 9:00ರವರೆಗೆ ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ ವಿನೋದ ಸಿ. ಮೈಸೂರು ಇವರ ನಿರ್ದೇಶನದಲ್ಲಿ ನಡೆಯಲಿದೆ.
ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತರು ತಕ್ಷಣವೇ ನೋಂದಾಯಿಸಿಕೊಳ್ಳಬಹುದು. ಮೊದಲು ಬಂದವರಿಗೆ ಆದ್ಯತೆ. ಸೀಮಿತ ಅವಕಾಶ.
ನಿರ್ದೇಶಕ ವಿನೋದ ಸಿ. ಮೈಸೂರು
ಮಂಡ್ಯ ರಮೇಶ್ ರವರ “ನಟನ” ರಂಗ ಶಾಲೆಯಲ್ಲಿ 2 ವರ್ಷ ವಿದ್ಯಾರ್ಥಿಯಾಗಿ, ಶ್ರೀ ಶಿವಕುಮಾರ ರಂಗ ಪ್ರಯೋಗ (ಸಾಣೀಹಳ್ಳಿ) ಶಾಲೆಯಲ್ಲಿ ಪದವೀಧರರು, ಶಿವ ಸಂಚಾರ ತಿರುಗಾಟ, ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಎಂ.ಎ. ಡ್ರಾಮಾ ಮಾಡಿರುತ್ತಾರೆ.
ನಟ ತಯಾರಿ ವರ್ಕ್ ಶಾಪ್ : Workshop in mysuru… for theatre ನಲ್ಲಿ 21 ದಿನಗಳ workshop.
ಅನುಭವ :
ಕಳೆದ 9 ವರ್ಷಗಳಿಂದ ನಿರಂತರವಾಗಿ ರಂಗ ಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿ.ಎಚ್.ಎನ್. ಶಾಲೆಯಲ್ಲಿ ಡ್ರಾಮಾ ಶಿಕ್ಷಕರಾಗಿ ಕೆಲಸ ಮಾಡಿರುತ್ತಾರೆ.
ವರ್ಕ್ ಶಾಪ್ ಇನ್ ಮೈಸೂರು ಫಾರ್ ಥೀಯೇಟರ್ ನಲ್ಲಿ co-ordinator ಆಗಿದ್ದಾರೆ.
ಕಳೆದ ಎರಡು ವರ್ಷಗಳಿಂದ “ಆನ್ ಸ್ಟೇಜ್ ಯೂಥ್ ಥಿಯೇಟರ್” ತಂಡವನ್ನು ನಡೆಸುತ್ತಿದ್ದಾರೆ. ಹಲವು ಶಾಲೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಮೇಕಪ್, ಲೈಟಿಂಗ್ ಡಿಸೈನರ್ ಆಗಿ ಹಲವು ನಾಟಕಗಳಲ್ಲಿ ಕೆಲಸ ಮಾಡಿರುತ್ತಾರೆ.
ನಟನಾಗಿ : ಚಾಮ ಚಲುವೆ, ವಾಖಾರಿ ಧೂಸ್, ಚೋರ ಚರಣ ದಾಸ, ವಲಸೆ ಹಕ್ಕಿಯ ಹಾಡು, ಸಾಯೋ ಆಟ, ಸುಭದ್ರಾ ಕಲ್ಯಾಣ, ಕೆಂಪು ಕಣಗಿಲೆ, ಕರ್ಣ ದ್ಯುಮಣಿ, ಬಿಚ್ಚಿದ ಜೋಳಿಗೆ, ಗುರು ಮಾತೆ ಅಕ್ಕನಾಗಲಂಬಿಕೆ, ನರ ಬಲಿ, ಊರು ಸುಟ್ಟರೂ ಹನುಮಪ್ಪ ಹೊರಗ, ತಲೆದಂಡ, ಪೊಲೀಸರಿದ್ದಾರೆ ಎಚ್ಚರಿಕೆ, ಹಗ್ಗದ ಕೊನೆ, ಕಾಂಬ್ರೆಡ್ ಕುಂಭಕರಣ ಹಾಗೂ ಹಲವು ಬೀದಿ ನಾಟಕಗಳು.
ನಿರ್ದೇಶಕನಾಗಿ : ಕುಣಿ ಕುಣಿ ನವಿಲೆ, ದೀಪ ಪಿಶಾಚಿ ದೀಪ, ಕುದುರೆ ಮೊಟ್ಟೆ, ಸುತ್ತು, ಹಗ್ಗದ ಕೊನೆ, ಟೊಳ್ಳು ಗಟ್ಟಿ, ಸಾಧು ಯುವ, ಗಾಂಧಿ ರೂಪಕ, ಊರು ಸುಟ್ಟರೂ ಹನುಮಪ್ಪ ಹೊರಗ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ವಿನೋದ ಸಿ. ಮೈಸೂರು ಮೊ.: 8892314554