ಉಡುಪಿ : ರಾಧಾಕೃಷ್ಣ ನೃತ್ಯನಿಕೇತನ (ರಿ.) ಉಡುಪಿ ಆಚರಿಸುವ ‘ಚಿಣ್ಣರ ಉತ್ಸವ’ ಕಾರ್ಯಕ್ರಮವು ದಿನಾಂಕ 22 ಆಗಸ್ಟ್ 2025ರಂದು ಸಂಜೆ 5-15 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಉಡುಪಿ ನಗರ ಸಭೆಯ ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್ ಇವರು ಉದ್ಘಾಟನೆ ಮಾಡಲಿದ್ದು, ಲಕ್ಷ್ಮೀಗುರುರಾಜ್ ಎಂ.ಎನ್.ಯು. (ರಿ.) ಉಡುಪಿ ಇದರ ನಿರ್ದೇಶಕರಾದ ನಾಟ್ಯ ಮಯೂರಿ ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.