ಬೆಂಗಳೂರು : ಮಂದಾರ ಗಾಯನ ಚೇತನ ಟ್ರಸ್ಟ್ (ರಿ.) ಬೆಂಗಳೂರು ಇದರ ವತಿಯಿಂದ ಡಾ. ಕಾ. ವೆಂ. ಶ್ರೀನಿವಾಸ ಮೂರ್ತಿ ವಿರಚಿತ ಭಾವಗೀತೆ, ಕನ್ನಡಪರ ಗೀತೆ ಹಾಗೂ ಜನಪದ ಗೀತೆಗಳ ‘ಕಾರ್ಯಾಗಾರ ಮತ್ತು ಗಾಯನ ಕಾರ್ಯಕ್ರಮವನ್ನು ದಿನಾಂಕ 24 ಆಗಸ್ಟ್ 2025ರಂದು ಬೆಂಗಳೂರು ಜೆ.ಸಿ. ರಸ್ತೆ, ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಆಯೋಜಿಸಲಾಗಿದೆ.
ಮಧ್ಯಾಹ್ನ 2-00 ಗಂಟೆಗೆ ಕಾರ್ಯಾಗಾರ ಮತ್ತು 5-30 ಗಂಟೆಗೆ ಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಗಾಯಕರು ಸಂಸ್ಥೆಯ ಅಧ್ಯಕ್ಷರೂ ಸಂಘಟಕರೂ ಆದ ಎರ್ರಿಸ್ವಾಮಿ ಎಚ್. ಇವರನ್ನು 9743060285 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.