ಸುಳ್ಯ : ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ಇದರ ವತಿಯಿಂದ ಆಯೋಜಿಸುವ ‘ಭೀಮರಾವ್ ವಾಷ್ಠರ್ ಉತ್ಸವ’ ಸಮಾರಂಭವು ದಿನಾಂಕ 24 ಆಗಸ್ಟ್ 2025ರಂದು ಬೆಳಿಗ್ಗೆ 9-30ಕ್ಕೆ ಸುಳ್ಯದ ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಅಭಿನಂದನಾ ಸಮಾರಂಭ, ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ರಸಮಂಜರಿ ನಡೆಯಲಿವೆ. ಕಾರ್ಯಕ್ರಮದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಇವರನ್ನು ಅಭಿನಂದನಾ ಗೌರವದಿಂದ ಸನ್ಮಾನಿಸಲಾಗುವುದು.
ಉತ್ಸವವನ್ನು ಸುಳ್ಯದ ಅಚ್ಚಾವರ ದೇವರಕಳಿಯ ಚೈತನ್ಯ ಸೇವಾಶ್ರಮ ಸಂಚಾಲಕರಾದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಇವರು ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಪ್ರಭಾಕರ ಶಿಶಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಏಳು ಮಂದಿ ಸನ್ಮಾನಿತರ ಪರವಾಗಿ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ನುಡಿಗಟ್ಟು ನೀಡಲಿದ್ದು, ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷ ಇಕ್ಬಾಲ್ ಬಾಳಿಲ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಹೃದಯದ ಮಾತು ಕಾರ್ಯಕ್ರಮದಲ್ಲಿ ಬೆಳಕು ಟ್ರಸ್ಟ್ ಅಧ್ಯಕ್ಷ ಹಾಗೂ ಸಂಜೆವಾಹಿನಿ ಪತ್ರಿಕೆಯ ಪ್ರಧಾನ ಸಂಪಾದಕ ಅಣ್ಣಪ್ಪ ಮೇಟಿಗೌಡ ಮಾತನಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಕೊಡಗು ಹಿರಿಯ ಸಾಹಿತಿ ವೈಲೇಶ್ ಪಿ.ಎಸ್., ಹಿರಿಯ ಸಾಹಿತಿ ಹಾ.ಮ. ಸತೀಶ್, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು, ಖ್ಯಾತ ಕವಯಿತ್ರಿ ಸಂಧ್ಯಾ ಕುಮಾರ್ ಉಬರಡ್ಕ ಮತ್ತು ಮಂಗಳೂರಿನ ಖ್ಯಾತ ಸಾಹಿತಿ ಅನಾರ್ಕಲಿ ಸಲೀಂ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗಾಯಕಿ ಶ್ರೀಮತಿ ಪುಷ್ಪಾವತಿ ಡಿ. ಇವರಿಂದ ಪ್ರಾರ್ಥನೆ, ಸ್ವಾಗತವನ್ನು ಸಾವಿತ್ರಿ ದೊಡ್ಡಮನೆ ಐವರ್ನಾಡು ಸಲ್ಲಿಸಲಿದ್ದಾರೆ. ಸನ್ಮಾನ ಪತ್ರವನ್ನು ಪ್ರಮೀಳಾ ರಾಜ್ ಐವರ್ನಾಡು ವಾಚಿಸಲಿದ್ದು, ವಂದನಾರ್ಪಣೆಯನ್ನು ಪೂರ್ಣಿಮಾ ಪೆರ್ಲಂಪಾಡಿ ಮಾಡುವರು. ಕಾರ್ಯಕ್ರಮವನ್ನು ಅನುರಾಧ ಶಿವಪ್ರಕಾಶ್ ಸುಳ್ಯ ನಿರೂಪಿಸಲಿದ್ದಾರೆ. ಚುಟುಕು ಕವಿಗೋಷ್ಠಿಗೆ ಪುತ್ತೂರಿನ ಹಿರಿಯ ಕವಯಿತ್ರಿ ರತ್ನಾ ಕೆ. ಭಟ್ ಇವರು ಅಧ್ಯಕ್ಷತೆ ವಹಿಸಲಿದ್ದು, ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ್ ಸ್ವಾಗತವನ್ನು ನೀಡಲಿದ್ದಾರೆ. ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ವಿಜಯಕುಮಾರ್ ಕಾಣಿಚ್ಛಾರ್ ನಿರೂಪಿಸಲಿದ್ದಾರೆ. ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಸುಳ್ಯದ ಗಾಯಕ ಸಂಘಟಕ ಲಕ್ಷ್ಮಣ್ ಪೆರುಮಾಳ್ ಇವರು ಅಧ್ಯಕ್ಷತೆ ವಹಿಸಲಿದ್ದು, ಗಾಯಕ ರಾಜೇಶ್ ಎಸ್.ಎನ್. ಮುಖ್ಯ ಅತಿಥಿಯಾಗಲಿದ್ದಾರೆ. ಸ್ವಾಗತವನ್ನು ಅರುಣ್ ರಾವ್ ಜಾಧವ್ ಸಲ್ಲಿಸಲಿದ್ದು, ಧನ್ಯವಾದವನ್ನು ಗೌರಿತಾ ಕೆ.ಜೆ. ಸುಬ್ರಹ್ಮಣ್ಯ ಮಾಡುವರು. ಸುಳ್ಯದಲ್ಲಿ ನಡೆಯಲಿರುವ ಈ ಭೀಮರಾವ್ ವಾಷ್ಠರ್ ಉತ್ಸವ ಸಾಹಿತ್ಯ ಸಂಗೀತದ ಸಾನ್ನಿಧ್ಯದಲ್ಲಿ ಜರುಗಲಿದ್ದು, ಗಾಯಕರು ಹಾಗೂ ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.