ಉಡುಪಿ : ರಾಧಾಕೃಷ್ಣ ನೃತ್ಯನಿಕೇತನ (ರಿ.) ಉಡುಪಿ ಪ್ರಸ್ತುತ ಪಡಿಸುವ ‘ನೃತ್ಯಾರ್ಪಣ’ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 28 ಆಗಸ್ಟ್ 2025ರಂದು ಸಂಜೆ 5-15 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದುಷಿ ವೀಣಾ ಎಂ. ಸಾಮಗರ ಶಿಷ್ಯೆ ಕುಮಾರಿ ಅದಿತಿ ಜಿ. ನಾಯಕ್ ಇವರು ನೃತ್ಯ ಕಾರ್ಯಕ್ರಮ ನೀಡಲಿದ್ದು, ನಟುವಾಂಗ, ಹಾಡುಗಾರಿಕೆ ಮತ್ತು ನೃತ್ಯ ನಿರ್ದೇಶನದಲ್ಲಿ ವಿದುಷಿ ವೀಣಾ ಎಂ. ಸಾಮಗರ, ಮೃದಂಗದಲ್ಲಿ ಮಂಗಳೂರಿನ ವಿದ್ವಾನ್ ಮನೋಹರ್ ರಾವ್, ವಯೋಲಿನ್ ನಲ್ಲಿ ಉಡುಪಿಯ ವಿದ್ವಾನ್ ಶ್ರೀಧರ ಆಚಾರ್ಯ ಮತ್ತು ಕೊಳಲಿನಲ್ಲಿ ಮಣಿಪಾಲದ ಡಾ. ಬಾಲಕೃಷ್ಣ ಇವರುಗಳು ಸಹಕರಿಸಲಿದ್ದಾರೆ.