ವಿರಾಜಪೇಟೆ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಬಳಗ ಕೊಡಗು ಜಿಲ್ಲೆ ಮತ್ತು ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ ವಿರಾಜಪೇಟೆ ಇವರ ಸಹಯೋಗದಲ್ಲಿ ದಿನಾಂಕ 31 ಆಗಸ್ಟ್ 2025ರ ಭಾನುವಾರದಂದು ಬೆಳಿಗ್ಗೆ 10-00 ಗಂಟೆಗೆ ವಿರಾಜಪೇಟೆಯ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ‘ಗಣೇಶೋತ್ಸವ ಕವಿಗೋಷ್ಠಿ, ಕೃತಿ ಲೋಕಾರ್ಪಣೆ, ಗೀತಗಾಯನ ಹಾಗೂ ಸಾಧಕರಿಗೆ ಸನ್ಮಾನ’ ಕಾರ್ಯಕ್ರಮವು ನಡೆಯಲಿದೆ.
ಮೈಸೂರಿನ ಖ್ಯಾತ ಕವಿಗಳಾದ ಜಯಪ್ಪ ಹೊನ್ನಾಳಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಉಪ ಖಜಾನೆಯ ಅಧೀಕ್ಷಕರಾದ ಗಣೇಶ್ ನಿಲುವಾಗಿಲು ಇವರ ‘ಹುಣಸೂರಿನ ಅರಸು’ ಕೃತಿಯ ಲೋಕಾರ್ಪಣೆ ಹಾಗೂ ಮೂವತ್ತಕ್ಕೂ ಹೆಚ್ಚು ಕವಿಗಳಿಂದ ಕವನ ವಾಚನ ನಡೆಯಲಿದೆ ಎಂದು ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನ ಸಂಸ್ಥಾಪಕರಾದ ವೈಲೇಶ್ ಪಿ.ಎಸ್. ಕೊಡಗು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು 8861405738 ಅಥವಾ 98862 64430 ಸಂಖ್ಯೆಗಳಿಗೆ ಸಂದೇಶ ಅಥವಾ ಕರೆಮಾಡಿ ನೋಂದಾಯಿಸಿಕೊಳ್ಳಬಹುದು.