ಬೆಂಗಳೂರು : ಶ್ರೀ ಗಣೇಶ ನೃತ್ಯಾಲಯದ ಕಲಾ ನಿರ್ದೇಶಕರಾದ ಶ್ರೀಯುತ ಗಣೇಶ್ ಹಾಗೂ ಅವರ ಪತ್ನಿ ಶ್ರೀಮತಿ ಭಾವನಾ ಗಣೇಶ್ ನೃತ್ಯ ದಂಪತಿಗಳು ತಮ್ಮ ನೃತ್ಯ ಶಾಲೆಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಮಾಸಿಕ ಭರತನಾಟ್ಯ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ನೀಡುತ್ತಾ ಬಂದಿದ್ದಾರೆ. ಈವರೆಗೆ ಹಲವಾರು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ದಿನಾಂಕ 24 ಆಗಸ್ಟ್ 2025ರಂದು ಬೆಂಗಳೂರಿನ ಅರಶಿನಗುಂಟೆಯಲ್ಲಿರುವ ಶ್ರೀ ಗಣೇಶ ನೃತ್ಯಾಲಯದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಶ್ರೀ ಗಣೇಶ್ ದಂಪತಿಗಳ ಹಿರಿಯ ವಿದ್ಯಾರ್ಥಿಗಳಾದ ಪೂರ್ವಿತಾ ಬಿ.ಜೆ., ಶಾಲಿನಿ ಜಿ., ಸಮೃದ್ಧಿ ವಿ. ಹೆಬ್ಬಾರ್ ಮತ್ತು ಗುರು ಡಾ. ಧ್ವರಿತಾ ವಿಶ್ವನಾಥರವರ ಶಿಷ್ಯೆ ಕೀರ್ತಿ ರಾಮನ್ ಇವರಿಂದ ಭರತನಾಟ್ಯ ಪ್ರಸ್ತುತಿ ನೀಡಿರುತ್ತಾರೆ. ಇದಕ್ಕೆ ಹಲವಾರು ಕಲಾ ರಸಿಕರು ಸಾಕ್ಷಿಯಾಗಿದ್ದರು.
ವಿಶೇಷ ಸೂಚನೆ : ‘ನೃತ್ಯೋಲ್ಲಾಸ’ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಸಕ್ತ ಯುವ ಕಲಾವಿದರು ಸಂಪರ್ಕಿಸಬಹುದು. ದೂರವಾಣಿ : +91 9449255842 ಮತ್ತು ಇ-ಮೇಲ್ : [email protected]