ಮಂಗಳೂರು : ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬೆಳ್ಳಿ ಹಬ್ಬ ‘ರಜತ ರಂಗು’ ಸಂಭ್ರಮದಲ್ಲಿರುವ ‘ಕಲ್ಲಚ್ಚು ಪ್ರಕಾಶನದ’ 16ನೇ ಆವೃತ್ತಿಯ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 31 ಆಗಸ್ಟ್ 2025ರಂದು ಸಂಜೆ 3-45 ಗಂಟೆಗೆ ಮಂಗಳೂರಿನ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದ ಎದುರಿನ ಹ್ಯಾಟ್ ಹಿಲ್ ನಲ್ಲಿ ಇರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಲಿದೆ.
ಈಗಾಗಲೇ ಕರ್ನಾಟಕದ ಪಂಚ ಸಾಧಕರಾದ ಜಬೀವುಲ್ಲಾ ಎಂ. ಅಸದ್, ಗೋಕಾವಿ ಗೆಳೆಯರ ಬಳಗ, ರೆಮೊನಾ ಎವೆಟ್ ಪೆರೇರಾ, ಡಾ. ಎಸ್.ಎಮ್. ಶಿವಪ್ರಕಾಶ್ ಮತ್ತು ಡಾ. ಪ್ರಕಾಶ ಕೆ. ಕೇಶವ ನಾಡಿಗ್ ಇವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಣೆ ಆಗಿದ್ದು, ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಾಹಿತಿ ಸಂತೋಷಕುಮಾರ ಮೆಹಂದಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಲಿರುವರು. ಕವಿ ರಘು ಇಡ್ಕಿದು ಇವರ ಅಭಿನಂದನಾ ಮಾತು ಹಾಗೂ ಎನ್. ಸುಬ್ರಾಯ ಭಟ್ ಇವರ ನಿರೂಪಣೆ ಇರುವ ಈ ಸಮಾರಂಭಕ್ಕೆ ಆಸಕ್ತರಿಗೆ ಮುಕ್ತ ಪ್ರವೇಶ ಇದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಮುಖ್ಯಸ್ಥ ಮಹೇಶ ಆರ್. ನಾಯಕ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಲ್ಲಚ್ಚು ಪ್ರಕಾಶನ ಪ್ರಕಟಿಸಿದ ಹಿರಿಯ ಲೇಖಕ ರಾದ ಮಂಗಳೂರಿನ ಕಡ್ಕೆ ರಾಮ ಅವಭೃತ ಇವರ ‘ಪರ್ಯಟನಾನುಭವ’ ಪ್ರವಾಸಿ ಕಥನ ಬಿಡುಗಡೆಗೊಳ್ಳಲಿದೆ.