ಮಂಗಳೂರು : ಸಂಸ್ಕೃತ ಸಂಘ ಹಾಗೂ ಸರೋಜಿನಿ ಮಧುಸೂಧನ ಕುಶೆ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ದಿನಾಂಕ 23 ಆಗಸ್ಟ್ 2025ರಂದು ಅತ್ತಾವರದಲ್ಲಿರುವ ಸರೋಜಿನೀ ಮಧುಸೂದನ ಕುಶೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಂಸ್ಕೃತೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ ವಿಜೃಂಭಣೆಯಿಂದ ಕೊನೆಗೊಂಡಿತು.
ಸಂಸ್ಕೃತ ಸ್ತೋತ್ರ ಕಂಠಪಾಠ ಸ್ಪರ್ಧೆ, ಸುಭಾಷಿತ ಕಂಠಪಾಠ ಸ್ಪರ್ಧೆ, ಏಕಪಾತ್ರಾಭಿನಯ, ಸಂಸ್ಕೃತ ಸಮುಗಾಯನ, ಸಮೂಹ ನೃತ್ಯ ಇತ್ಯಾದಿ 11 ಸ್ಪರ್ಧೆಗಳಿಗೆ 20ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿಂದ 300ಕ್ಕೂ ಹೆಚ್ಚು ಅಧಿಕ ವಿದ್ಯಾರ್ಥಿಗಳು ಆಗಮಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾಗಿರುವವರಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ ಭಾರತೀ ಸೊರಕೆ ಪ್ರಪಂಚದ ಅತ್ಯಂತ ಶ್ರೇಷ್ಠವಾದ ಭಾಷೆ ಸಂಸ್ಕೃತ, ಅದನ್ನು ಬಾಲ್ಯದಿಂದಲೇ ಕಲಿತರೆ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ವೃದ್ಧಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎನ್.ಐ.ಟಿ.ಕೆ. ಸುರತ್ಕಲ್ ನ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರಾದ ಸುಬ್ರಹ್ಮಣ್ಯ ಭಟ್ಟರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರು, ಪ್ರಸಿದ್ಧ ಜ್ಯೋತಿಷ್ಕರಾದ ಶ್ರೀ ರಂಗ ಐತಾಳರು ಮಾತನಾಡಿ “ಯಾವತ್ತೂ ಮನುಷ್ಯನಿಗೆ ಭಾಷಾಭಿಮಾನ, ದೇಶಾಭಿಮಾನ, ಸ್ವಾಭಿಮಾನದ ಕೊರತೆ ಬರಬಾರದು. ಕಾಯಾ, ವಾಚಾ, ಮನಸಾ ಸಂಸ್ಕೃತವನ್ನು ಉಳಿಸೋಣ ಮತ್ತು ಬೆಳೆಸೋಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ಸಂಘದ ಗೌರವಾಧ್ಯಕ್ಷರಾದ ಕೆ.ಪಿ. ವಾಸುದೇವರಾವ್, ಸರೋಜನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಅಧಿಕಾರಿ ಮುರಳಿಧರ ರಾವ್, ಪ್ರಾಂಶುಪಾಲರಾದ ಬಿಂದುಸಾರ ಶೆಟ್ಟಿ ಉಪಸ್ಥಿತರಿದ್ದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಅಶ್ವಿನಿ ಕಿಣಿ, ಸನ್ಮಾನಿತರ ಪರಿಚಯವನ್ನು ಸಂಸ್ಕೃತ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ರಮೇಶ ಆಚಾರ್ಯ ನಿರ್ವಹಿಸಿದರು. ಅಧ್ಯಕ್ಷರಾದ ಪೈ. ವೆಂಕಟರಮಣ ಭಟ್ ಸ್ವಾಗತಿಸಿ, ಕಾರ್ಯದರ್ಶಿಗಳಾದ ಶ್ರೀನಿವಾಸ ಮಧ್ಯಸ್ಥ ವಂದಿಸಿ, ರವಿಶಂಕರ ಹೆಗಡೆ ನಿರೂಪಿಸಿದರು.
ಪ್ರಾರ್ಥನಾ ಶ್ಲೋಕಗಳ ಕಂಠಪಾಠ ಸ್ಪರ್ಧೆ
ಸ್ತರ – ಎಲ್.ಕೆ.ಜಿ. ಮತ್ತು ಯು.ಕೆ.ಜಿ.
ಪ್ರಥಮ – ಧನ್ವಿ ಎಚ್. (ಶಾರದಾ ವಿದ್ಯಾಪೀಠ ಉರ್ವ ಸ್ಟೋರ್)
ದ್ವಿತೀಯ – ಧೀಮಹಿ ಕೋಟ್ಯಾನ್ (ಶಾರದಾ ವಿದ್ಯಾನಿಕೇತನ ತಲಪಾಡಿ)
ತೃತೀಯ – ಇಶಾನ್ವಿ (ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್)
ಪ್ರಾರ್ಥನಾ ಶ್ಲೋಕಗಳ ಕಂಠಪಾಠ ಸ್ಪರ್ಧೆ
ಸ್ತರ -ಒಂದು ಮತ್ತು ಎರಡನೇ ತರಗತಿ
ಪ್ರಥಮ – ಆತ್ರೇಯ (ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್)
ದ್ವಿತೀಯ – ಪೂರ್ವಿ ಕಲನಾಡ್ (ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ತೊಕ್ಕಟ್ಟು)
ತೃತೀಯ – ಚಿನ್ಮಯಿ ಭಟ್ (ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ತೊಕ್ಕಟ್ಟು)
ಸುಭಾಷಿತ ಕಂಠಪಾಠಗಳ ಸ್ಪರ್ಧೆ
ಸ್ತರ – ಮೂರರಿಂದ ಐದನೇ ತರಗತಿ
ಪ್ರಥಮ – ಧಾತ್ರಿ ಭಟ್ (ಕೆನರಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಊರ್ವ ಸ್ಟೋರ್)
ದ್ವಿತೀಯ – ಅಭೀಷ್ಟಕೃಷ್ಣ (ಶಾರದಾ ವಿದ್ಯಾನಿಕೇತನ, ತಲಪಾಡಿ)
ತೃತೀಯ – ಅಚಿಂತ್ಯ (ಶಾರದಾ ವಿದ್ಯಾಲಯ, ಕೊಡಿಯಾಲ್ ಬೈಲ್)
ಸುಭಾಷಿತ ಕಂಠಪಾಠಗಳ ಸ್ಪರ್ಧೆ
ಸ್ತರ – ಆರು ಮತ್ತು ಏಳನೇ ತರಗತಿ
ಪ್ರಥಮ – ಅಮೋಘ ಮೋಹನ (ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್)
ದ್ವಿತೀಯ – ಶ್ರೇಯಾ ಆರ್. ಶೆಟ್ಟಿ (ಶಕ್ತಿ ವಸತಿ ಶಾಲೆ)
ತೃತೀಯ – ಸ್ತುತಿ ಕೆ. (ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್)
ಪ್ರೋತ್ಸಾಹಕರ ಬಹುಮಾನ – ತನವ ಶ್ರೀಪಾದ (ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್)
ಸಂಸ್ಕೃತ ಸಮೂಹ ಗಾಯನ ಸ್ಪರ್ಧೆ
ಸ್ತರ – ಆರು ಮತ್ತು ಏಳನೇ ತರಗತಿ
ಪ್ರಥಮ – ಅವನಿ ಮತ್ತು ತಂಡ (ಕೆನರಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಊರ್ವ)
ದ್ವಿತೀಯ – ಶ್ರೀಜಯ ಮತ್ತು ತಂಡ (ಕೆನರಾ ಪ್ರೌಢಶಾಲೆ ಸಿ.ಬಿ.ಎಸ್.ಸಿ.)
ತೃತೀಯ – ನಿರೀಕ್ಷಾ ಮತ್ತು ತಂಡ (ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ, ಸುರತ್ಕಲ್)
ಸಂಸ್ಕೃತ ಏಕ ಪಾತ್ರಾಭಿನಯ ಸ್ಪರ್ಧೆ
ಸ್ತರ – ಪ್ರೌಢಶಾಲಾ (ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್)
ಪ್ರಥಮ – ಶರ್ವಾಣಿ (ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್)
ದ್ವಿತೀಯ – ಜ್ಯೋತ್ಸ್ನಾ ಹೆಗಡೆ (ಕೆನರಾ ಪ್ರೌಢಶಾಲೆ ಸಿ.ಬಿ.ಎಸ್.ಸಿ.)
ತೃತೀಯ – ಸಾನ್ವಿ ಬಿ.ಕೆ. (ಕೆನರಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಊರ್ವ)
ಸಂಸ್ಕೃತ ಸಮೂಹ ಗಾಯನ ಸ್ಪರ್ಧೆ
ಸ್ತರ – ಪ್ರೌಢಶಾಲಾ
ಪ್ರಥಮ – ಲಕ್ಷ್ಮಣ ಮತ್ತು ತಂಡ (ಕೆನರಾ ಪ್ರೌಢಶಾಲೆ ಸಿ.ಬಿ.ಎಸ್.ಸಿ.)
ದ್ವಿತೀಯ – ಸಿಂಚನಾ ಮತ್ತು ತಂಡ (ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ತೊಕ್ಕಟ್ಟು)
ತೃತೀಯ – ಧರಿತ್ರೀ ಮತ್ತು ತಂಡ (ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್)
ರಸಪ್ರಶ್ನೆ ಸ್ಪರ್ಧೆ
ಸ್ತರ – ಪದವಿ ಪೂರ್ವ
ಪ್ರಥಮ – ವಿಧೇಯ ಮತ್ತು ಅಗಸ್ತ್ಯ (ಶಾರದಾ ಪದವಿಪೂರ್ವ ಕಾಲೇಜ್ ಮಂಗಳೂರು)
ದ್ವಿತೀಯ – ಸ್ಕಂದಕುಮಾರ ಮತ್ತು ವೈಷ್ಣವಿ (ಸರೋಜಿನಿ ಮಧುಸೂದನ ಕುಶೆ ವಿದ್ಯಾ ಸಂಸ್ಥೆ ಅತ್ತಾವರ)
ತೃತೀಯ – ನಿಹಾರಿಕಾ ಮತ್ತು ದಿಶಾ ಲಕ್ಷ್ಮಿ (ಶಾರದಾ ಪದವಿಪೂರ್ವ ಕಾಲೇಜ್ ಮಂಗಳೂರು)
ಸಮೂಹ ನತ್ಯ ಸ್ಪರ್ಧೆ
ಸ್ತರ – ಪದವಿಪೂರ್ವ
ಪ್ರಥಮ – ಕೆ. ಪ್ರಣತಿ ಮತ್ತು ತಂಡ (ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್)
ದ್ವಿತೀಯ – ಶ್ರಾವ್ಯಾ ಮತ್ತು ತಂಡ (ಗೋವಿಂದದಾಸ ಪದವಿಪೂರ್ವ ಕಾಲೇಜ್)
ತೃತೀಯ – ತನ್ಮಯಿ ಮತ್ತು ತಂಡ (ಸರೋಜಿನಿ ಮಧುಸೂದನ ಕುಶೆ ವಿದ್ಯಾ ಸಂಸ್ಥೆ ಅತ್ತಾವರ)
ಪ್ರೋತ್ಸಾಹಕರ ಬಹುಮಾನ – ವೈಷ್ಣವಿ ಮತ್ತು ತಂಡ (ಕೆನರಾ ಪದವಿ ಪೂರ್ವ ಕಾಲೇಜು)
ಸಂಸ್ಕೃತ ಭಾಷಣ ಸ್ಪರ್ಧೆ
ಸ್ತರ – ಪದವಿ
ಪ್ರಥಮ – ಸಾತ್ವಿಕ್ ಎಲ್. ಭಾರದ್ವಾಜ್ (ಕೆನರಾ ಕಾಲೇಜ್ ಮಂಗಳೂರು)
ದ್ವಿತೀಯ – ಅಪೇಕ್ಷಾ ಎಂ. (ಕೆನರಾ ಕಾಲೇಜ್, ಮಂಗಳೂರು)
ಸಮೂಹ ಸ್ತೋತ್ರ ಗಾಯನ ಸ್ಪರ್ಧೆ
ಸ್ತರ – ಪದವಿ
ಪ್ರಥಮ – ಅದಿತಿ ಉಡುಪ ಮತ್ತು ತಂಡ (ಕೆನರಾ ಕಾಲೇಜ್ ಮಂಗಳೂರು)
ದ್ವಿತೀಯ – ಭೂಮಿಕಾ ಮತ್ತು ತಂಡ (ಗೋವಿಂದದಾಸ ಕಾಲೇಜ್ ಸುರತ್ಕಲ್)