ಮೂಡುಬಿದಿರೆ : ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕ ಮತ್ತು ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ಎನ್.ಎಸ್.ಎಸ್. ಘಟಕದ ವತಿಯಿಂದ ನಡೆದ ‘ಕನ್ನಡ ಕಂಪು’ ಕನ್ನಡ ಕಲರವ ಮತ್ತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 28 ಆಗಸ್ಟ್ 2025ರಂದು ಎಸ್.ಎನ್.ಎಂ. ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿನಿಯರಾದ ಮೇಘನಾ ಮತ್ತು ಮನ್ವಿತಾ ಇವರ ಪ್ರಾರ್ಥನೆ ಮೂಲಕ ಸಭಾ ಕಾರ್ಯಕ್ರಮವನ್ನು ಪ್ರಾರಂಭವಾಯಿತು. ಎನ್.ಎಸ್.ಎಸ್. ಘಟಕ ನಾಯಕರ ಕನ್ನಡ ನೃತ್ಯ, ವಿದ್ಯಾರ್ಥಿನಿಯರಾದ ಚಿತ್ರಶ್ರೀ ಮತ್ತು ಮನ್ವಿತಾ ಇವರ ಕನ್ನಡದ ಮಾತು, ಸುದರ್ಶನ್ ಇವರ ಕನ್ನಡದ ಹಾಡು ಕಾರ್ಯಕ್ರಮಕ್ಕೆ ಮುದ ನೀಡಿತ್ತು. ಮುಖ್ಯ ಉಪನ್ಯಾಸಕರಾಗಿ ಜೈನ ಪ್ರೌಢಶಾಲೆಯ ಕನ್ನಡ ಪ್ರಾಧ್ಯಾಪಕರಾದ ನಿತೇಶ್ ಬಲ್ಲಾಳ್, ಅತಿಥಿಯಾಗಿ ಸದಾನಂದ ನಾರಾವಿ, ಅಧ್ಯಕ್ಷತೆಯನ್ನು ಕ.ಸಾ.ಪ. ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿ ವಹಿಸಿದ್ದು, ಪಾಲಿಟೆಕ್ನಿಕ್ ನ ಎಲೆಕ್ಟ್ರಾನಿಕ್ಸ್ ವಿಭಾಗದ ಶ್ರೀಮತಿ ರಾಜೇಶ್ವರಿ ಕೆ.ಎಸ್., ಎನ್.ಎಸ್.ಎಸ್. ಅಧಿಕಾರಿಗಳಾದ ರಾಮ್ ಪ್ರಸಾದ್ ಮತ್ತು ಗೋಪಾಲಕೃಷ್ಣ ಉಪಸ್ಥಿತರಿದ್ದರು. ಶಿಬಾನಿ ಕಾರ್ಯಕ್ರಮ ನಿರೂಪಿಸಿ, ಪೂರ್ಣಿಮಾ ಸ್ವಾಗತಿಸಿ, ವಿನೋದ್ ಧನ್ಯವಾದ ಸಮರ್ಪಿಸಿದರು.