ಕಾಸರಗೋಡು : ಗೋಪಾಲಕೃಷ್ಣ ದೇವಸ್ಥಾನದಲ್ಲಿ ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ತರಗತಿಗಳು ದಿನಾಂಕ 31 ಆಗಸ್ಟ್ 2025ರಂದು ಆರಂಭಗೊಳ್ಳಲಿವೆ. ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಆಶ್ರಯದಲ್ಲಿ ನಡೆಯುವ ಈ ತರಗತಿಯನ್ನು ಯಕ್ಷಗಾನದ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಬೆಳಗ್ಗೆ ಘಂಟೆ 10.00 ಉದ್ಘಾಟಿಸುವರು.
ಮಾಂಬಾಡಿಯವರ ಶಿಷ್ಯ ಹಾಗೂ ಎರಡು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆ ನಿರ್ವಹಿಸುತ್ತಿರುವ ಬಾಲಕೃಷ್ಣ ಆಚೆಗೋಳಿ ತರಗತಿ ನಡೆಸುವರು. ತರಬೇತಿ ಕೇಂದ್ರದ ಅಧ್ಯಕ್ಷರಾದ ಚಂದ್ರಮೋಹನ ಕೂಡ್ಲು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಕುತ್ಯಾಳ ದೇವಾಲಯದ ಮೊಕ್ತಸರ ಹಾಗೂ ತರಬೇತಿ ಕೇಂದ್ರದ ಗೌರವಾಧ್ಯಕ್ಷರಾದ ಕೂಡ್ಲು ಗೋಪಾಲಕೃಷ್ಣ ಶ್ಯಾನುಭೋಗ್, ಕಾರ್ಯದರ್ಶಿ ಕಿಶೋರ್‌ಕುಮಾರ್ ಕೂಡ್ಲು ಪಾಲ್ಗೊಳ್ಳುವರು. ಈಗಾಗಲೇ ಈ ಕೇಂದ್ರದಲ್ಲಿ ರಂಜಿತ್ ಗೋಳಿಯಡ್ಕ ಅವರಿಂದ ನಾಟ್ಯ ತರಗತಿಗಳು ನಡೆಯುತ್ತಿವೆ. ಯಾವುದೇ ತರಗತಿಗಳಿಗೆ ಸೇರಲಿಚ್ಛಿಸುವವರು 9744803074 5 8075278118 5 ಮೊಬೈಲ್ ನಂಬ್ರಗಳಿಗೆ ಕರೆ ಮಾಡಲು ತಿಳಿಸಲಾಗಿದೆ
Subscribe to Updates
Get the latest creative news from FooBar about art, design and business.
Previous Articleನಟನದಲ್ಲಿ ‘ಲವ್ ಲೆಟರ್ಸ್’ ನಾಟಕ ಪ್ರದರ್ಶನ | ಆಗಸ್ಟ್ 31