ತುಮಕೂರು: ತುಮಕೂರು ಕೃಷ್ಣಮಂದಿರದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಸ್ಥೆಯ ಕಲಾವಿದರು ಕೃಷ್ಣಾಷ್ಠಮಿ ಕಾರ್ಯಕ್ರಮದ ಪ್ರಯುಕ್ತ ‘ಹೂವಿನ ಕೋಲು’ ಮತ್ತು ಯಕ್ಷಗಾನ ‘ಕೃಷ್ಣಲೀಲೆ-ಕಂಸವಧೆ’ ಪ್ರದರ್ಶನ ದಿನಾಂಕ 08 ಆಗಸ್ಟ್ 2025 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಯಶಸ್ವಿ ಕಲಾವೃಂದದ ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಮತ್ತು ಕಾರ್ಯದರ್ಶಿ ವೆಂಕಟೇಶ ವೈದ್ಯ ಇವರನ್ನು ಗೌರವಿಸಿದ ತುಮಕೂರಿನ ಉದ್ಯಮಿ ಕೋಣಿ ನಾಗರಾಜ ಧನ್ಯ ಮಾತನಾಡಿ “ತುಮಕೂರಿನ ಮಹಾ ಜನತೆಗೆ ಕರಾವಳಿಯ ಯಕ್ಷಗಾನ ಪ್ರಕಾರ ಹೂವಿನಕೋಲು ಕಾರ್ಯಕ್ರಮ ನೀಡಿ, ಪರಿಚಯಿಸಿ, ಕರಾವಳಿಯ ಕಲೆಯನ್ನು ಎತ್ತಿ ಹಿಡಿದ ಸಂಸ್ಥೆ ಯಶಸ್ವಿ ಕಲಾವೃಂದ. ಮಕ್ಕಳ ಮೂಲಕ ಕಲೆಯ ಪ್ರಬುದ್ಧತೆಯನ್ನು ರಂಗದಲ್ಲಿ ಮೆರೆವ ಸಂಸ್ಥೆ ಅದ್ಭುತ ಯಕ್ಷಗಾನ ಪ್ರದರ್ಶನದಿಂದ ಸಂಸ್ಥೆ ಯಶಸ್ವೀ ದಿನಗಳತ್ತ ದಾಪುಗಾಲು ಇಡುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.
ದೇವಳದ ಜನಾರ್ಧನ ಭಟ್, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸುದರ್ಶನ ಉರಾಳ ಕೋಟ, ಉಪನ್ಯಾಸಕ ಶಶಾಂಕ್ ಪಟೇಲ್, ರಾಹುಲ್ ಕುಂದರ್ ಕೋಡಿ ಕನ್ಯಾಣ, ದೇವಳದ ಆಡಳಿತ ಮಂಡಳಿಯ ಸದಸ್ಯರು, ಯಶಸ್ವೀ ಕಲಾವೃಂದದ ಕಲಾವಿದರು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಸಾಂಪ್ರದಾಯಿಕ ಕಲೆ ಹೂವಿನಕೋಲು, ಯಕ್ಷಗಾನ ‘ಕೃಷ್ಣಲೀಲೆ ಕಂಸವಧೆ’ ರಂಗ ಪ್ರಸ್ತುತಿಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಮದಗ ಶ್ರೀ ಜನಾರ್ದನ ದೇವಳದ ವಠಾರದಲ್ಲಿ ತಾಳಮದ್ದಳೆ