ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಮದಗ ಶ್ರೀ ಜನಾರ್ದನ ದೇವಳದ ವಠಾರದಲ್ಲಿ ದಿನಾಂಕ 27 ಆಗಸ್ಟ್ 2025ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜಾರು ಪಡ್ನೂರು ಇದರ 38ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ತಾಳಮದ್ದಳೆ ‘ದಾಶರಥಿ ದರ್ಶನ’ ಎಂಬ ಆಖ್ಯಾನದೊಂದಿಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಜಯರಾಮ ಭಟ್ ಹಾಗೂ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಜಯಂತಿ ಹೆಬ್ಬಾರ್ (ಶ್ರೀ ಕೃಷ್ಣ), ಶುಭಾ ಗಣೇಶ್ (ನಾರದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ) ಸಹಕರಿಸಿದರು. ಸಂಘದ ಕೋಶಾಧಿಕಾರಿ ದುಗ್ಗಪ್ಪ ನಡುಗಲ್ಲು ಸ್ವಾಗತಿಸಿ, ನಿರ್ದೇಶಕ ಭಾಸ್ಕರ ಬಾರ್ಯ ವಂದಿಸಿದರು. ಗಣೇಶೋತ್ಸವ ಸಮಿತಿ ವತಿಯಿಂದ ಕಲಾವಿದರಿಗೆ ಶ್ರೀ ದೇವರ ಪ್ರಸಾದ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.]