Subscribe to Updates

    Get the latest creative news from FooBar about art, design and business.

    What's Hot

    ಹರಿಕಥಾ ಪರಿಷತ್ ನ ವತಿಯಿಂದ ‘ಹರಿಕಥಾ ಸಪ್ತಾಹ’ | ಆಗಸ್ಟ್ 30

    August 29, 2025

    ಆಳ್ವಾಸ್ ನಲ್ಲಿ ರಾಜ್ಯ ಮಟ್ಟದ ಒಂದು ದಿನದ ಕರ‍್ಯಗಾರ

    August 29, 2025

    ಶ್ರೀ ಕ್ಷೇತ್ರ ಎಡನೀರು ಮಠದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಬಯಲಾಟ | ಆಗಸ್ಟ್ 31

    August 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಆಳ್ವಾಸ್ ನಲ್ಲಿ ರಾಜ್ಯ ಮಟ್ಟದ ಒಂದು ದಿನದ ಕರ‍್ಯಗಾರ
    Literature

    ಆಳ್ವಾಸ್ ನಲ್ಲಿ ರಾಜ್ಯ ಮಟ್ಟದ ಒಂದು ದಿನದ ಕರ‍್ಯಗಾರ

    August 29, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗ್ರಂಥಪಾಲಕರ ಸಂಘ ಮತ್ತು ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ ‘ಗ್ರಂಥಾಲಯ ಸೇವೆಗಳ ನಾವಿನ್ಯತೆ ಹಾಗೂ ಪರಿಣಾಮಕಾರಿ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ದಿನಾಂಕ 23 ಆಗಸ್ಟ್ 2025ರ ಶನಿವಾರದಂದು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜರುಗಿತು.


    ಮಂಗಳೂರು ವಿ.ವಿ. ಕಾಲೇಜಿನ ಡಾ. ಮಾಧವ ಎಂ. ಕೆ ಮಾತನಾಡಿ “ಗ್ರಂಥಾಲಯ ವಿಭಾಗದಲ್ಲಿ ಕೆಲಸ ಮಾಡುವವರು ಸರಸ್ವತಿಯ ದಾಸೋಹಿಗಳು. ಅವರ ಸೇವೆ ಅಕ್ಷರಶಃ ಮಾನವ ಸಮಾಜದ ಬೆಳಕಿನ ದೀಪ. ಜ್ಞಾನ ಹಂಚುವ ಕರ‍್ಯದಲ್ಲಿ ತೊಡಗಿರುವ ಅವರು ನಿಜಕ್ಕೂ ಪುಣ್ಯವಂತರು. ಈ ಜಗತ್ತಿನಲ್ಲಿ ಭಗವಂತನು ಮಾನವನಿಗೆ ನೀಡಿರುವ ಅತ್ಯಂತ ಅಮೂಲ್ಯವಾದ ವರವೇ ಸಮಯ. ಧನ, ಪದವಿ, ಸ್ಥಾನಮಾನದಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಸಮಯ ಮಾತ್ರ ಎಲ್ಲರಿಗೂ ಸಮಾನವಾಗಿ ಹಂಚಲ್ಪಟ್ಟಿದೆ. ಈ ಸಮಯವನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆಯೇ ಜೀವನದ ಸಾಧನೆ ನಿರ್ಧಾರವಾಗುತ್ತದೆ. ಕಲಿಕೆಯ ದೇಗುಲವಾದ ಗ್ರಂಥಾಲಯದಲ್ಲಿ ಸಮಯ ಕಳೆಯುವವರು ನಿಜವಾದ ಸಾಧಕರು. ಓದುವ ಹವ್ಯಾಸ ಇರುವವರು ಎಂದಿಗೂ ಅಧೀರರಾಗುವುದಿಲ್ಲ. ಓದಿನಿಂದ ಮಾನಸಿಕ ಆರೋಗ್ಯ, ಏಕಾಗ್ರತೆ, ಒತ್ತಡಮುಕ್ತ ಜೀವನ ಸಾಧ್ಯವಾಗುವುದರ ಜೊತೆಗೆ ಜ್ಞಾನದ ಹಸಿವು, ಭಾವನಾತ್ಮಕ ಧೈರ್ಯ, ಸ್ಥೈರ್ಯ, ಕಲ್ಪನಾಶಕ್ತಿ ಮತ್ತು ಭಾಷಾಸಂಪತ್ತು ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳನ್ನು ಗ್ರಂಥಾಲಯದತ್ತ ಸೆಳೆಯುವ ಸೃಜನಶೀಲ ಕಾರ್ಯಕ್ರಮಗಳನ್ನು ರೂಪಿಸುವುದು ಕಾಲದ ಅವಶ್ಯಕತೆ. ಬದುಕನ್ನು ಹೇಗೆ ನೋಡುತ್ತೇವೆ ಎಂಬುದರ ಮೇಲೆ ಬದುಕು ನಿರ್ಮಾಣವಾಗುತ್ತದೆ. ಜೋಗದ ಜಲಪಾತವನ್ನು ನೋಡಿ ಕೆಲವರು ಕೇವಲ ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾರೆ. ಆದರೆ ಅದೇ ದೃಶ್ಯವನ್ನು ಸರ್ ಎಂ. ವಿಶ್ವೇಶ್ವರಯ್ಯ ಕಂಡಾಗ, ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ರೂಪಿಸುವ ಪ್ರೇರಣೆ ದೊರಕಿತು. ಅದೇ ಜೋಗದ ಜಲಪಾತವನ್ನು ಕವಿ ನಿಸಾರ್ ಅಹಮದ್ ನೋಡಿದಾಗ, ಪ್ರಕೃತಿಯ ಸೊಬಗಿನೊಂದಿಗೆ ಮಾನವ ಜೀವನವನ್ನು ಜೋಡಿಸಿ “ನಿತ್ಯೋತ್ಸವ” ಎಂಬ ಅದ್ಭುತ ಕವಿತೆಯನ್ನು ರಚಿಸಿದರು. ಮತ್ತೊಬ್ಬ ಸಿನಿಮಾ ನಟ ಗಣೇಶ್ ಅದೇ ಜಲಪಾತವನ್ನು ನೋಡಿ ಹರ್ಷೋದ್ಗಾರಗೊಂಡು “ಕುಣಿದು ಕುಣಿದು ಬಾರೆ” ಎಂಬ ಹಾಡಿಗೆ ನೃತ್ಯ ಮಾಡಿದರು” ಎಂದರು.

    ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಕುರಿಯನ್ ಮಾತನಾಡಿ “ಜಗತ್ತಿನ ಎಲ್ಲಾ ಸಾಧನೆಯ ಹಿಂದೆ ಗ್ರಂಥಾಲಯದ ಪಾತ್ರವಿದೆ. ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ, ಮಾಸ್ತಿಯನ್ನು ಓದಿಕೊಂಡು ಜ್ಞಾನದ ವರ್ಜನೆಗೆ ಶ್ರಮಿಸಬೇಕು” ಎಂದರು.
    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ “ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಸಾಧನಗಳ ಬಳಕೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳ ಗಮನ ಗ್ರಂಥಾಲಯದಿಂದ ದೂರವಾಗುತ್ತಿದೆ. ಇಂಟರ್ನೆಟ್, ಮೊಬೈಲ್, ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಸಮಯವನ್ನು ಆಕ್ರಮಿಸಿವೆ. ಈ ಹಿನ್ನೆಲೆ, ವಿದ್ಯಾರ್ಥಿಗಳನ್ನು ಪುನಃ ಗ್ರಂಥಾಲಯದತ್ತ ಸೆಳೆಯುವ ನವೀನ ಕಾರ್ಯಯೋಜನೆಗಳನ್ನು ರೂಪಿಸುವುದು ಕಾಲದ ಅವಶ್ಯಕತೆ. ಈ ನೆಲೆಯಲ್ಲಿ ಈ ಕರ‍್ಯಗಾರ ಹೊಸ ಸಾಧ್ಯತೆಗಳ ಕುರಿತು ಯೋಚಿಸಲಿ” ಎಂದರು.

    ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳ ಗ್ರಂಥಾಪಾಲಕರ ಸಂಘದ ನ್ಯೂಸ್ ಬುಲೆಟಿನ್‌ ಅನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ನಿವೃತ್ತ ಗ್ರಂಥಪಾಲಕರಾದ ಬೇಸಂಟ್ ಕಾಲೇಜಿನ ಪ್ರೋ ವಾಸಪ್ಪ ಗೌಡ, ಮಾಹೆಯ ಲೀಲಾವತಿಯವರನ್ನು ಸನ್ಮಾನಿಸಲಾಯಿತು. ‘ಅಧ್ಯಾಪಕ ಭೂಷಣಾ ಪ್ರಶಸ್ತಿ’ ವಿಜೇತೆರಾದ ಯಶೋಧಾ ಹಾಗೂ ವಿಜಯಲತಾ, ಶಿಕ್ಷಣಾ ಇಲಾಖೆಯಿಂದ ‘ರಾಜ್ಯ ಮಟ್ಟದ ಅತ್ಯುತ್ತಮ ಗ್ರಂಥಪಾಲಕಿ ಪ್ರಶಸ್ತಿ’ ವಿಜೇತೆ ರಂಜಿತಾ ಸಿ, ಮಂಗಳೂರು ವಿ. ವಿ. ಯಲ್ಲಿ ಸ್ನಾತಕೋತ್ತರ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಅದಿಥಿ, ಈ ವರ್ಷ ಪಿ. ಎಚ್‌. ಡಿ. ಪದವಿ ಪಡೆದ ಡಾ. ಪ್ರೇಮಾ, ಡಾ. ಲೋಕೇಶ್ ಹಾಗೂ ಡಾ. ಲೋಕನಾಥ್‌ ಇವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ಕಾಲೇಜಿನ ಗ್ರಂಥಾಲಯ ವಿಭಾಗ ಅಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದರಿಗೆ ಬಹುಮಾನ ವಿತರಿಸಲಾಯಿತು.
    ಮೈಸೂರು ವಿ. ವಿ.ಯ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಆದಿತ್ಯ ಕುಮಾರಿ ಎಚ್., ಆಳ್ವಾಸ್ ಕಾಲೇಜಿನ ಮುಖ್ಯ ಗ್ರಂಥಾಪಾಲಕಿ ಶ್ಯಾಮಲತಾ ಉಪಸ್ಥಿತರಿದ್ದರು. ಕರ‍್ಯಗಾರದಲ್ಲಿ ಸಂಘದ 85ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡರು. ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳ ಗ್ರಂಥಾಪಾಲಕರ ಸಂಘದ ಅಧ್ಯಕ್ಷೆ ಡಾ. ರೇಖಾ ಡಿ. ಪೈ ಸ್ವಾಗತಿಸಿ, ಸದಸ್ಯೆ ಡಾ ಸುಜಾತಾ ಕರ‍್ಯಕ್ರಮ ನಿರೂಪಿಸಿ, ಕರ‍್ಯದರ್ಶಿ ಡಾ. ವನಜಾ ಬಿ. ವಂದಿಸಿದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಕ್ಷೇತ್ರ ಎಡನೀರು ಮಠದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಬಯಲಾಟ | ಆಗಸ್ಟ್ 31
    Next Article ಹರಿಕಥಾ ಪರಿಷತ್ ನ ವತಿಯಿಂದ ‘ಹರಿಕಥಾ ಸಪ್ತಾಹ’ | ಆಗಸ್ಟ್ 30
    roovari

    Add Comment Cancel Reply


    Related Posts

    ಹರಿಕಥಾ ಪರಿಷತ್ ನ ವತಿಯಿಂದ ‘ಹರಿಕಥಾ ಸಪ್ತಾಹ’ | ಆಗಸ್ಟ್ 30

    August 29, 2025

    ಶ್ರೀ ಕ್ಷೇತ್ರ ಎಡನೀರು ಮಠದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಬಯಲಾಟ | ಆಗಸ್ಟ್ 31

    August 29, 2025

    ವಿವೇಕಾನಂದ ಕಾಲೇಜಿನಲ್ಲಿ ‘ಭಾರತಿಯ ಜೀವನ ದರ್ಶನ’ ಪ್ರವಚನ ಮಾಲಿಕೆ

    August 29, 2025

    ರಾಮನಗರದಲ್ಲಿ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನ 2025 | ಆಗಸ್ಟ್ 30

    August 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.