ಬೆಂಗಳೂರು : ಅಭಿನಯ ತರಂಗ ಅರ್ಪಿಸುವ ‘ಚಿತ್ರಾ’ ನಾಟಕ ತಂಡದ 75 ವರ್ಷಗಳ ಸಂಭ್ರಮದ ಪ್ರಯುಕ್ತ ‘ಚಿತ್ರಾ – 75’ ಎ.ಎಸ್. ಮೂರ್ತಿಯವರ ಸ್ಮರಣಾರ್ಥ ನಾಟಕ ಸ್ಪರ್ಧೆಯನ್ನು ದಿನಾಂಕ 24ರಿಂದ 30 ಅಕ್ಟೋಬರ್ 2025ರವರೆಗೆ ಸುಚಿತ್ರ ನಾಣಿ – ಭಾನು ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.
ಎ.ಎಸ್. ಮೂರ್ತಿಯವರು ಎಸ್. ರಾಮನಾಥನ್ ಅವರೊಂದಿಗೆ 1951ರಲ್ಲಿ ಪ್ರಾರಂಭಿಸಿದ ‘ಚಿತ್ರಾ’ ತಂಡ ಈಗ 75ಕ್ಕೆ ಕಾಲಿಟ್ಟಿದೆ. ರಂಗಭೂಮಿ ಚಲನಚಿತ್ರಗಳ ಬಗ್ಗೆ ವಿಚಾರ ಸಂಕಿರಣ ಚರ್ಚೆ, ನಾಟಕದ ಓದು, ನಾಟಕ, ಸಂಗೀತ ಕಾರ್ಯಕ್ರಮಗಳನ್ನು ಈಗಲೂ ನಡೆಸುತ್ತಿದೆ. ಅಲ್ಲದೆ ಅನೇಕ ರಂಗ ನಾಟಕಗಳನ್ನಾಡಿದೆ. ಬೀದಿ ನಾಟಕವನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಮಾಡಿದ ಹೆಗ್ಗಳಿಕೆ ‘ಚಿತ್ರಾ’ ತಂಡದ್ದು. ಚಿತ್ರಾ ತನ್ನ 75ನೇ ವರ್ಷದ ಹುಟ್ಟುಹಬ್ಬವನ್ನು ‘ನಾಟಕ ಸ್ಪರ್ಧೆ’ ಏರ್ಪಡಿಸುವ ಮೂಲಕ ಆಚರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ಸ್ಪರ್ಧೆ ಪ್ರತಿವರ್ಷ ನಡೆಯುತ್ತಿದ್ದು, ನಾಟಕದ ಅವಧಿ ಕನಿಷ್ಠ 45 ನಿಮಿಷಗಳು ಗರಿಷ್ಠ 60 ನಿಮಿಷ ಇರಬಹುದು. ಪ್ರವೇಶ ಶುಲ್ಕ ರೂ.2,500/- ಆಗಿದ್ದು, ನೋಂದಾಯಿಸಲು 15 ಸೆಪ್ಟೆಂಬರ್ 2025 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 98458 25217 ಮತ್ತು 95380 38383 ಸಂಖ್ಯೆಯನ್ನು ಸಂಪರ್ಕಿಸಿರಿ.