ಧಾರವಾಡ : ಅಭಿನಯ ಭಾರತಿ ಸಂಸ್ಥೆಯು ಹಿರಿಯ ಶಿಕ್ಷಣ ತಜ್ಞ ದಿ. ವಜ್ರಕುಮಾರ ಸ್ಮರಣಾರ್ಥ ‘ವಜ್ರ ಸಿರಿ ರಂಗೋತ್ಸವ 2025’ ಮೂರು ನಾಟಕ ಪ್ರದರ್ಶನವನ್ನು ದಿನಾಂಕ 03 ಮತ್ತು 04 ಸೆಪ್ಟೆಂಬರ್ 2025ರಂದು ಧಾರವಾಡದ ಕರ್ಣಾಟಕ ಕಾಲೇಜಿನ ಆವರಣ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದೆ.
ದಿನಾಂಕ 03 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಜೆ.ಎಸ್.ಎಸ್. ಕಾರ್ಯದರ್ಶಿ ಡಾ. ಅಜಿತ ಪ್ರಸಾದ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ಉದ್ಯಮಿ ಡಾ. ಸಿ.ಎಚ್.ಕೆ.ವಿ. ಪ್ರಸಾದ ಇವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ 6-00 ಗಂಟೆಗೆ ಬೆಳಗಾವಿಯ ರಂಗಸಂಪದ ತಂಡದವರು ವಿಜಯದಾಸರ ಜೀವನ ಆಧಾರಿತ ಭಕ್ತಿ ಪ್ರಧಾನ ಹಾಗೂ ಸಂಗೀತಮಯ ನಾಟಕವಾದ ‘ಸ್ಮರಿಸಿ ಬದುಕಿರೋ’ ನಾಟಕವನ್ನು ಮನೋಜ್ಞವಾಗಿ ಪ್ರಸ್ತುತಪಡಿಸಲಿದ್ದಾರೆ.
ದಿನಾಂಕ 04 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಝಕೀರ್ ನದಾಫ್ ರಚಿಸಿ, ನಿರ್ದೇಶಿಸಿದ ‘ನೆಲಮುಗಿಲು’ ಮತ್ತು 7-00 ಗಂಟೆಗೆ ‘ಹಾಲು ಬಟ್ಟಲದೊಳಗಿನ ಪಾಲು’ ನಾಟಕವನ್ನು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ರಂಗ ಆರಾಧನಾ ತಂಡ ಪ್ರಸ್ತುತ ಪಡಿಸಲಿದೆ. ನಾಟಕಗಳ ವೀಕ್ಷಣೆಗೆ ಪ್ರವೇಶ ಶುಲ್ಕವಿದ್ದು, ಟಿಕೆಟ್ ಹಾಗೂ ಮಾಹಿತಿಗಾಗಿ ಸಮೀರ ಜೋಶಿ ಮೊ: 98454 47002 ಮತ್ತು ಅರವಿಂದ ಕುಲಕರ್ಣಿ ಮೊ: 80734 79394 ಸಂಪರ್ಕಿಸಬಹುದು.