ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಪ್ರತಿ ವರ್ಷವೂ ಹಮ್ಮಿಕೊಳ್ಳುವ ವಾರ್ಷಿಕ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವದ ಕಾರ್ಯಕ್ರಮವು ದಿನಾಂಕ 05 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಮಂಗಳೂರು ಕೋಡಿಯಾಲ್ ಬೈಲ್ ಇಲ್ಲಿರುವ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ಧ್ಯಾನ ಸಂಗೀತ ಅಕಾಡೆಮಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಮತ್ತು ಲಘು ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು 2-00 ಗಂಟೆಗೆ ಪ್ರಾರಂಭವಾಗಲಿದ್ದು, ವಿಶ್ವಜೀತ್ ಕಿಣಿ ಉಪ್ಪುಂದ, ಸುರೇಶ್ ಪೈ, ಸಂದೀಪ್ ಪೂಜಾರಿ ಮತ್ತು ಕುಮಾರಿ ದಿವ್ಯ ನಿಧಿ ರೈ ಹಾರ್ಮೋನಿಯಂನಲ್ಲಿ ಹಾಗೂ ಸುಮನ್ ದೇವಾಡಿಗ, ಸಂತೋಷ್ ಸಾಲ್ಯಾನ್, ದರ್ಶನ್ ದೇವಾಡಿಗ ಮತ್ತು ಸ್ಮರಾಜ್ ಎಂ.ಎಸ್. ತಬಲಾದಲ್ಲಿ ಸಹಕರಿಸಲಿದ್ದಾರೆ. 3-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಖ್ಯಾತ ಗಾಯಕರಾದ ಡಾ. ಕೃಷ್ಣಮೂರ್ತಿ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಡಾ. ಕೃಷ್ಣಮೂರ್ತಿ ಭಟ್ ಇವರ ಹಿಂದೂಸ್ತಾನಿ ಸಂಗೀತ ಗಾಯನ ಕಛೇರಿಗೆ ತಬಲಾದಲ್ಲಿ ಉಡುಪಿಯ ಟಿ. ರಂಗ ಪೈ ಹಾಗೂ ಮಂಗಳೂರಿನ ಪ್ರೊ. ನರೇಂದ್ರ ಎಲ್. ನಾಯಕ್ ರವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಎಲ್ಲಾ ಸಂಗೀತಾಸಕ್ತ ಶೋತೃಗಳಿಗೆ ಮುಕ್ತ ಪ್ರವೇಶವಿದೆ.