ಮೈಸೂರು : ಕು. ಪ್ರಸನ್ನಾ ಹೆಚ್. ಇವರು 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ವಿದ್ವತ್ ಪೂರ್ವ ರಾಜ್ಯ ಮಟ್ಟದ ಸಂಗೀತ ಹಾಡುಗಾರಿಕೆ ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಈಕೆ ಚಿಟ್ಪಾಡಿಯ ಹರಿಕೃಷ್ಣ ಆಚಾರ್ಯ ಮತ್ತು ವಿದ್ಯಾ ದಂಪತಿಗಳ ಸುಪುತ್ರಿ. ಸಂಗೀತ ಶಿಕ್ಷಕಿ ವಿದುಷಿ ವಿನುತಾ ಆಚಾರ್ಯ ಹಾಗೂ ವಿದುಷಿ ಭಾರ್ಗವಿ ಹೆಚ್. ಚೆನ್ನೈ ಇವರ ಶಿಷ್ಯೆಯಾಗಿರುತ್ತಾರೆ.