ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕಾವ್ಯಾಂ ವ್ಹಾಳೊ-6’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ದಿನಾಂಕ 06 ಸಪ್ಟೆಂಬರ್ 2025ರಂದು ಸಂಜೆ 4-00 ಗಂಟೆಗೆ ಅಕಾಡೆಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರು ವಹಿಸಿಕೊಳ್ಳಲಿದ್ದು, ಕೊಂಕಣಿಯ ಹಿರಿಯ ಸಾಹಿತಿಗಾರರಾದ ಹೇಮಾಚಾರ್ಯಯವರು ಮುಖ್ಯ ಅತಿಥಿಯಾಗಿ ಹಾಗೂ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಶ್ರೀ ರೊನಿ ಕ್ರಾಸ್ತಾ ಕೆಲರಾಯ್ ಇವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಶ್ರೀ ರೋಶನ್ ಎಮ್. ಕಾಮತ್ ವಾಮಂಜೂರು, ಕು. ಅಲ್ರೀಶಾ ರೊಡ್ರಿಗಸ್, ಶ್ರೀಮತಿ ಚಂದ್ರಿಕಾ ಮಲ್ಯ, ಶ್ರೀ ರೋಮನ್ಸ್ ಲೋಬೊ ಗುರುಪುರ, ಸ್ಟೆಫನ್ ವಾಸ್ ಕೆಲರಾಯ್, ಶ್ರೀಮತಿ ಎಸ್. ಜಯಶ್ರೀ ಶೆಣೈ, ಶ್ರೀ ಪೆದ್ರು ಪ್ರಭು ತಾಕೊಡೆ (ಪೀಟರ್ ಡಿಸೋಜ), ಶ್ರೀಮತಿ ಸೋನಿಯಾ ಡಿ’ಕೋಸ್ತ, ಶ್ರೀ ಕೆರನ್ ಮಾಡ್ತಾ, ಶ್ರೀ ವಲೇರಿಯನ್ ಮೊರಾಸ್ ತಾಕೊಡೆ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.