ಬೆಂಗಳೂರು : ‘ಈ ಹೊತ್ತಿಗೆ ಟ್ರಸ್ಟ್’ ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ‘ಕಪ್ಪಣ್ಣ ಅಂಗಳ’ ಇವರ ಸಹಯೋಗದೊಂದಿಗೆ ರವೀಂದ್ರನಾಥ್ ಟ್ಯಾಗೋರರ ಕೆಲವು ಕತೆಗಳನ್ನಾಧರಿಸಿದ ರೂಪಕ “ಅವಳ ಕಾಗದ’ದ ಪ್ರದರ್ಶನವು ದಿನಾಂಕ 01-05-2023 ಸೋಮವಾರದಂದು ಬೆಂಗಳೂರಿನ ಜೆ.ಪಿ. ನಗರದ, ಕಪ್ಪಣ್ಣ ಅಂಗಳದಲ್ಲಿ ಸಂಜೆ 4ಕ್ಕೆ ಮತ್ತು ಇಳಿ ಸಂಜೆ 6-30ಕ್ಕೆ ನಡೆಯಲಿದೆ.
ಲೇಖಕಿ, ಅಂಕಣಕಾರ್ತಿ ಸುಧಾ ಆಡುಕಳ ಬರೆದ ಈ ರೂಪಕವನ್ನು ಶ್ವೇತಾ ಹಾಸನ ವಿನ್ಯಾಸ ಮಾಡಿದ್ದು, ಬೆಳಕಿನ ವಿನ್ಯಾಸವನ್ನು ಶ್ರೀನಿವಾಸ್ ಜಿ. ಕಪ್ಪಣ್ಣ ಮಾಡಲಿದ್ದಾರೆ. ಡಾ. ಶ್ರೀಪಾದ ಭಟ್ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿ ಬರುವ ಈ ರೂಪಕವನ್ನು ಅಹಲ್ಯಾ ಬಲ್ಲಾಳ್ ಪ್ರಸ್ತುತಪಡಿಸಲಿದ್ದಾರೆ.
‘ಅವಳ ಕಾಗದ’
ವಿವಾಹಿತ ಮಹಿಳೆಯೊಬ್ಬಳು ಯಾತ್ರೆಗೆಂದು ಹೋಗಿ ಅಲ್ಲಿಂದಲೇ ತನ್ನ ಪತಿಗೆ ಬರೆಯುವ ಪತ್ರರೂಪದ ಕತೆಯ ಮೂಲಕ ಟಾಗೋರರು ಇಂದಿಗೆ ನೂರು ವರ್ಷಗಳ ಹಿಂದೆಯೇ ಸ್ತ್ರೀಯರ ಒಳಲೋಕಕ್ಕೆ ಅನಾಧಾರಣವಾದ ಪ್ರವೇಶ ನೀಡುತ್ತಾರೆ.
ಶ್ರೀಮಂತರ ಮನೆಯ ಎರಡನೆಯ ಸೊಸೆಯಾಗಿ ಅವಳ ಜೀವನ ಪಯಣ ಯಾವ ದಾರಿಯಲ್ಲಿ ಸಾಗಿತು? ಅವಳಿಗಾಗಲೀ ಅವಳ ಪ್ರತಿರೂಪಗಳಂತಿರುವ ಚಂದ್ರಾ ಮತ್ತು ಬಿಂದುವಿಗಾಗಲೀ ದಕ್ಕಿದ್ದೇನು?
ಕೊನೆಗೂ ಈ ಕತೆ ನಿಜಕ್ಕೂ ನೂರು ವರ್ಷ ಹಳೆಯದೋ ಅಥವಾ…