ಮಳವಳ್ಳಿ : ರಂಗಬಂಡಿ ಮಳವಳ್ಳಿ (ರಿ.) ಇದರ ವತಿಯಿಂದ ಹಾಗೂ ಯುನಿವರ್ಸಲ್ ಸೇವಾ ಟ್ರಸ್ಟ್ (ರಿ.) ಮಳವಳ್ಳಿ ಇದರ ಸಹಯೋಗದೊಂದಿಗೆ ಆಯೋಜಿಸುವ ‘ಮಳವಳ್ಳಿ ಸುಂದರಮ್ಮ ನಾಟಕೋತ್ಸವ 2025-26’ ಕಾರ್ಯಕ್ರಮಗಳನ್ನು ದಿನಾಂಕ 09 ಸೆಪ್ಟೆಂಬರ್ 2025ರಿಂದ 15 ಸೆಪ್ಟೆಂಬರ್ 2025ರವೆರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಮಳವಳ್ಳಿಯ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ ಹಿಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 09 ಸೆಪ್ಟೆಂಬರ್ 2025ರಂದು ಮಂಡ್ಯ ರಮೇಶ್ ಇವರ ನಿರ್ದೇಶನದಲ್ಲಿ ನಟನ (ರಿ.) ಮೈಸೂರು ಪ್ರಸ್ತುತ ಪಡಿಸುವ ‘ಸ್ಥಾವರವೂ ಜಂಗಮ’, ದಿನಾಂಕ 10 ಸೆಪ್ಟೆಂಬರ್ 2025ರಂದು ಡಾ. ಕೆ. ರಾಮಕೃಷ್ಣಯ್ಯ ಇವರ ನಿರ್ದೇಶನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾವಿಭಾಗ ಪ್ರಸ್ತುತ ಪಡಿಸುವ ‘ಮಂಟೇಸ್ವಾಮಿ ಕಥಾ ಪ್ರಸಂಗ’, ದಿನಾಂಕ 11 ಸೆಪ್ಟೆಂಬರ್ 2025ರಂದು ರಮೇಶ್ ಬೆಣಕಲ್ ಇವರ ನಿರ್ದೇಶನದಲ್ಲಿ ಶ್ರೀರಂಗ ಪಟ್ಟಣದ ಗಮ್ಯ (ರಿ.) ಪ್ರಸ್ತುತ ಪಡಿಸುವ ‘ಪರಿಣಯ ಪ್ರಸಂಗ’, ದಿನಾಂಕ 12 ಸೆಪ್ಟೆಂಬರ್ 2025ರಂದು ವಿದ್ವಾನ್ ವೈ.ಎಂ. ಪುಟ್ಟಣ್ಣಯ್ಯ ಇವರ ನಿರ್ದೇಶನದಲ್ಲಿ ಮೈಸೂರಿನ ಸುರುಚಿ ರಂಗಮನೆ ಪ್ರಸ್ತುತ ಪಡಿಸುವ ಪೌರಾಣಿಕ ನಾಟಕ ‘ಶ್ರೀಮದ್ ರಾಮಾಯಣ’, ದಿನಾಂಕ 13 ಸೆಪ್ಟೆಂಬರ್ 2025ರಂದು ಸುಗುಣ ಎಂ.ಎಂ. ಇವರ ನಿದೇಶನದಲ್ಲಿ ಮೈಸೂರಿನ ನಿರಂತರ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ಬಸವಣ್ಣನವರ ವಚನಗಳ ಆಧಾರಿತ ದೃಶ್ಯ ರೂಪಕ ‘ಕೂಡಲ ಸಂಗಮ’, ದಿನಾಂಕ 14 ಸೆಪ್ಟೆಂಬರ್ 2025ರಂದು ಡಾ. ಬಿ.ವಿ. ರಾಜಾರಾಂ ಇವರ ನಿರ್ದೇಶನದಲ್ಲಿ ಕಲಾ ಗಂಗೋತ್ರಿ ಪ್ರಸ್ತುತ ಪಡಿಸುವ ‘ಮುಖ್ಯಮಂತ್ರಿ’, ದಿನಾಂಕ 15 ಸೆಪ್ಟೆಂಬರ್ 2025ರಂದು ಮಧು ಮಳವಳ್ಳಿ ನಿರ್ದೇಶನದಲ್ಲಿ ರಂಗಬಂಡಿ ಮಳವಳ್ಳಿ ಪ್ರಸ್ತುತ ಪಡಿಸುವ ‘ಕಲ್ಯಾಣದ ಬಾಗಿಲು’ ನಾಟಕಗಳು ಪ್ರದರ್ಶನಗೊಳ್ಳಲಿದೆ.