ಮಂಗಳೂರು : ಮಾಂಡ್ ಸೊಭಾಣ್ ಮತ್ತು ಕಲಾಂಗಣ್ ವತಿಯಿಂದ ಡಾ. ಸವಿತಾ ರಾಣಿ ಇವರ ನಿರ್ದೇಶನದಲ್ಲಿ ‘ಹೊ ತೊ ತೊ ಹೊ’ ಕೊಂಕಣಿ ನಾಟಕ ಪ್ರದರ್ಶನವನ್ನು ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ ಘಂಟೆ 6-30ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಅರುಣ್ ರಾಜ್ ಲುದ್ರಿಗ್ ಮತ್ತು ವಿಕಾಸ್ ಕಲಾಕುಲ್ ಇವರು ಅನುವಾದಿಸಿದ್ದು, ರೆನೊಲ್ಡ್ ಲೋಬೊ ಮತ್ತು ಕ್ರೀತನ್ ಡಿ’ಸೋಜಾ ಸಂಗೀತ ನೀಡಿರುತ್ತಾರೆ.