ಮಂಗಳೂರು : ತನ್ನಿಸ್ತಾ ಬಾಗ್ಚಿ ಮತ್ತು ಸಾಂಸ್ಕೃತಿಕ ಸಂಘಟನೆ ಒಕ್ವೇವ್ ತಂಡದ ನೇತೃತ್ವದಲ್ಲಿ ‘ಬೆಂಗಾಲಿ ಕ್ರಿಯೇಟಿವ್ ಡ್ಯಾನ್ಸ್ ಕಾರ್ಯಾಗಾರ’ವು ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಮೇ 3ರಿ೦ದ 12ರ ತನಕ ನಡೆಯಲಿದೆ.
ಕಾರ್ಯಾಗಾರವು ಸಂಜೆ 5.30ರಿಂದ 7.30ರ ತನಕ ನಡೆಯಲಿದ್ದು, 9 ವರ್ಷ ಮೇಲ್ಪಟ್ಟ ಯಾರೂ ಕೂಡಾ ಈ ಡಾನ್ಸ್ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದೆಂದು ನೃತ್ಯ ನಿರ್ದೇಶಕಿ ತನ್ನಿಸ್ತಾ ಬಾಗ್ಚಿ ತಿಳಿಸಿದರು.
ಈ ಕಾರ್ಯಾಗಾರವು ನೃತ್ಯ ಮತ್ತು ಹಾಡಿನ ಮೂಲಕ ಬಂಗಾಳದ ರೋಮಾಂಚಕ ಸಂಸ್ಕೃತಿಯ ಅನುಭವ ನೀಡಲಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ “ಸ್ಟೈಲ್ ಆಫ್ ಉದಯ್ ಶಂಕರ್” ಅನ್ನು ಕೇಂದ್ರೀಕರಿಸಿ ಸೃಜನಶೀಲ ನೃತ್ಯದ ವಿವಿಧ ವ್ಯಾಯಾಮಗಳು ಮತ್ತು ತಂತ್ರಗಳನ್ನು ಕಲಿಯಲು ಅನನ್ಯ ಅವಕಾಶವಿದೆ. ಉದಯ್ ಶಂಕರ್ ಒಬ್ಬ ಭಾರತೀಯ ನರ್ತಕ ಮತ್ತು ನೃತ್ಯ ಸಂಯೋಜಕರಾಗಿದ್ದರು. ಅವರು ಭಾರತೀಯ ಶಾಸ್ತ್ರೀಯ ನೃತ್ಯಗಳನ್ನು ಸಂಯೋಜಿಸುವ ಭಾರತೀಯ ನೃತ್ಯದ ಹೊಸ ಶೈಲಿಯನ್ನು ಸೃಷ್ಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಕ್ರಿಯೇಟಿವ್ ಡ್ಯಾನ್ಸ್ ಕಾರ್ಯಾಗಾರದ ನೋಂದಣಿ ಸ್ಥಳದಲ್ಲಿ ಲಭ್ಯವಿದ್ದು, ಈ ಹತ್ತು ದಿನದ ಕಾರ್ಯಾಗಾರದ ಶುಲ್ಕವು ರೂ.1,500 ಆಗಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತನುಷಾ ಶೆಟ್ಟಿ ಮತ್ತು ಬಿಸ್ವಜೀತ್ ಗಂಗೂಲಿ ಅವರನ್ನು ಕ್ರಮವಾಗಿ 096635 33694 ಮತ್ತು 9263208552ಗೆ ಕರೆ ಮಾಡಿ ಸಂಪರ್ಕಿಸಬಹುದು.