ಉಡುಪಿ : ತಿಂಗಳೆ ಪ್ರತಿಷ್ಠಾನ ಮತ್ತು ಸಂಜೀವ ಶಿಷ್ಯ ವೃಂದ ಇದರ ವತಿಯಿಂದ ‘ಸಂಜೀವ ಯಕ್ಷ ಜೀವ-ಭಾವ’ ಸಮಾರಂಭವನ್ನು ದಿನಾಂಕ 12 ಸೆಪ್ಟೆಂಬರ್ 2025ರಂದು ಸಂಜೆ 3-00 ಗಂಟೆಗೆ ಉಡುಪಿ ಕುಂಜಿಬೆಟ್ಟುವಿನಲ್ಲಿರುವ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಉದ್ಘಾಟನೆಯನ್ನು ಯಕ್ಷ ಸಂಘಟಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಇವರು ಮಾಡಲಿದ್ದು, ಡಾ. ಗಿರಿಜಾ ಇವರು ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. 3-30 ಗಂಟೆಗೆ ಗುರು ಬನ್ನಂಜೆ ಸಂಜೀವ ಸುವರ್ಣ ಇವರಿಂದ ಪಾರಂಪರಿಕ ಯಕ್ಷಗಾನ ನೃತ್ಯ ಪ್ರದರ್ಶನ ನಡೆಯಲಿದೆ. ಕರ್ಣಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ‘ನಮ್ಮ ಸಂಜೀವ’ ಗೋಷ್ಠಿಗಳು ಪ್ರಸ್ತುತಗೊಳ್ಳಲಿವೆ.