ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಆಶ್ರಯದಲ್ಲಿ ಮಹಮದ್ ಗೌಸ್ ಸಾರಥ್ಯದ ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳ ಕುಂದಾಪುರ ತಂಡದ ಯಕ್ಷಗಾನ ಪ್ರದರ್ಶನ ದಿನಾಂಕ 02 ಸೆಪ್ಟೆಂಬರ್ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಮಾತನಾಡಿ “ನಿರಂತರ ಹಲವು ವರ್ಷಗಳಿಂದ ಜಾತಿ, ಧರ್ಮ, ಬೇಧ ತೊರೆದು ಕೇವಲ ಕಲೆಯನ್ನೇ ಆರಾಧಿಸುತ್ತಾ, ಮಳೆಗಾಲದಲ್ಲಿ ಕಲಾವಿದರಿಗೆ ನೂರಾರು ಅವಕಾಶಗಳನ್ನು ಕಲ್ಪಿಸಿಕೊಡುತ್ತಾ ಶ್ರೇಷ್ಠರಾದವರು ಮಹಮದ್ ಗೌಸ್. ಅನೇಕ ನಿಂದನೆಗಳನ್ನು ಸಹಿಸಿಕೊಳ್ಳುತ್ತಾ ಮತ್ತೆ ಮತ್ತೆ ಎಚ್ಚೆತ್ತು ಕಲಾವಿದರಿಗಾಗಿ ವಂತಿಗೆ ಎತ್ತುತ್ತಾ ತನ್ನಲ್ಲಿರುವ ಕಲೆಯ ತುಡಿತವನ್ನು ಎತ್ತಿಹಿಡಿದವರು. ಇವರು ತನಗಾಗಿ ಏನೂ ಮಾಡಿಕೊಂಡಿರದ ಕಲಾ ತಪಸ್ವಿ” ಎಂದು ಪ್ರಶಂಸನೀಯ ಮಾತುಗಳನ್ನಾಡಿದರು.
ಪ್ರಸಿದ್ಧ ಯಕ್ಷಗಾನದ ಅರ್ಥಧಾರಿ ಸತೀಶ್ ಶೆಟ್ಟಿ ಮೂಡಬಗೆ ಮಾತನಾಡಿ “ಪ್ರಸಂಗದಲ್ಲಿ ಹೆಚ್ಚು ಪಾತ್ರವನ್ನು ರಂಗದಲ್ಲಿ ತಂದು ಕಥೆಯ ಔಚಿತ್ಯವನ್ನು ಜನರಿಗೆ ಮನಮುಟ್ಟುವಂತೆ ಮಾಡುವ ಮೂಲಕ ಸಂಸ್ಥೆಯನ್ನು ಬೆಳೆಸಿದವರು ಗೌಸ್. ವ್ಯವಹಾರದ ದೃಷ್ಠಿಯಿಂದಲೇ ಈ ಕಲೆಯನ್ನು ಅಪ್ಪಿಕೊಂಡಿದ್ದರೆ ಕೇವಲ ಮರ‍್ನಾಲ್ಕು ವೇಷಗಳನ್ನು ರಂಗದಲ್ಲಿ ತಂದು ಅಚ್ಚು ಕಟ್ಟಾಗಿ ನಿರ್ವಹಿಸಿ ನಡೆಯುತ್ತಿದ್ದರು. ಆದರೆ ಕಲಾವಿದರಿಗೆ ಹೊತ್ತಿನ ಊಟದ ನೆರವು ತನ್ನಿಂದಾಗಬೇಕೆನ್ನುವ ಕಾರಣಕ್ಕಾಗಿ ಶ್ರಮಿಸುತ್ತಿರುವವರು ಗೌಸ್. ಅವರಿಗೆ ಉತ್ತರೋತ್ತರ ಶ್ರೇಯಸ್ಸಾಗಲಿ” ಎಂದು ಹಾರೈಸಿದರು.
ಭಾಗವತರಾದ ಪ್ರಸನ್ನ ಭಟ್ ಬಾಳ್ಕಲ್, ಗೋಳಿಗರಡಿ ಮೇಳದ ವ್ಯವಸ್ಥಾಪಕರಾದ ಗೋಪಾಲ್ ಆಚಾರ್, ನಾಗರಾಜ ಮಂಜರು, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ‘ರಾಜಾರುದ್ರಕೋಪ’ ರಂಗದಲ್ಲಿ ಪ್ರಸ್ತುತಿಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಉಪ್ಪಿನಂಗಡಿಯಲ್ಲಿ ಶ್ರೀ ಮಹಾಭಾರತ ಸರಣಿ ಸುವರ್ಣ ಶತಕ ತಾಳಮದ್ದಳೆ ಕಾರ್ಯಕ್ರಮ