ಕಾರ್ಕಳ : ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ. ಇ. ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಕಲ್ಲು ,ಮರ ಹಾಗೂ ಲೋಹ ಶಿಕ್ಷಣ ವಿಭಾಗಗಳಲ್ಲಿ 18 ತಿಂಗಳ ಅವಧಿಯ ಉಚಿತ ತರಬೇತಿಯ ಹೊಸ ಬ್ಯಾಚ್ ದಿನಾಂಕ 15 ಸೆಪ್ಟೆಂಬರ್ 2025ರಂದು ಪ್ರಾರಂಭವಾಗಲಿದ್ದು, ಈ ತರಗತಿಗೆ ಸೇರಲಿಚ್ಛಿಸುವ 18 ರಿಂದ 35 ವರ್ಷದೊಳಗಿನ 7ನೇ ತರಗತಿ ಕಲಿತ ಆಸಕ್ತ ಯುವಜನರು ಕೂಡಲೇ ಸಂಸ್ಥೆಯ ಆವರಣದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಬೆಳಿಗ್ಗೆ 10.30 ರಿಂದ ಸಂಜೆ 4.00 ಗಂಟೆಯ ಒಳಗೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಯು ತಂದೆ ಅಥವಾ ತಾಯಿಯ ಜೊತೆಗೆ ಬರಬೇಕು ಹಾಗೂ ಈ ಕೆಳಗೆ ನಮೂದಿಸಿದ ದಾಖಲೆ ಪ್ರತಿಗಳನ್ನು ತರಬೇಕು.
1. ಅಭ್ಯರ್ಥಿಯ ಆಧಾರ್ ಕಾರ್ಡ್
2. ಪೋಷಕರ ಆಧಾರ್ ಕಾರ್ಡ್
3. ರೇಷನ್ ಕಾರ್ಡ್
4. Marks ಕಾರ್ಡ್
5. ವರ್ಗಾವಣೆ ಪ್ರಮಾಣ ಪತ್ರ (ಟಿ. ಸಿ.)
6. ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣ ಪತ್ರ
7. ಪಾಸ್ ಪೋರ್ಟ್ size ಫೋಟೋ 5
8. ಉತ್ತಮ ಆರೋಗ್ಯದ ವೈದ್ಯಕೀಯ ದ್ರಢೀಕರಣ ಪತ್ರ
9. ರಕ್ತದ ಗುಂಪು
ತರಬೇತಿ ಮುಗಿದ ನಂತರ ಸ್ವ ಉದ್ಯೋಗಕ್ಕೆ ಬೇಕಾದ ಸಾಲ ಸೌಲಭ್ಯವನ್ನು ಬ್ಯಾಂಕಿನಿಂದ ಪಡೆಯಲು ಅನುಕೂಲ ಮಾಡಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಶ್ರೀ ರಾಜೇಶ್ ಶೆಣೈ, ನಿರ್ದೇಶಕರು (9481402895 / 9449414316)
ಶ್ರೀ ನಾಗೇಶ್ ಆಚಾರ್ಯ, ಶಿಕ್ಷಕರು (9448501078)
ಶ್ರೀ ಹರೀಶ್ ಕೆ. ನಾಯಕ್, ಶಿಕ್ಷಕರು (9844054413)
Subscribe to Updates
Get the latest creative news from FooBar about art, design and business.
ಸಿ. ಇ. ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಿಂದ ಅರ್ಜಿ ಆಹ್ವಾನ | ಸೆಪ್ಟೆಂಬರ್ 15
No Comments1 Min Read
Previous Article‘ಬಹುವಚನಂ’ನಲ್ಲಿ ‘ಭೂತಾರಾಧನೆ’ ಕುರಿತು ಉಪನ್ಯಾಸ | ಸೆಪ್ಟೆಂಬರ್ 14