ಮಂಗಳೂರು : ಅಂತಾರಾಷ್ಟ್ರೀಯ ಕಲಾವಿದ, ಯಕ್ಷಗಾನ ಹಾಗೂ ರಂಗಭೂಮಿಯ ಕಲಾವಿದ ದಿ. ಪಿ.ವಿ. ಪರಮೇಶ್ ಇವರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದಿನಾಂಕ 15 ಸೆಪ್ಟೆಂಬರ್ 2025ನೇ ಸೋಮವಾರ ಬೆಳಿಗ್ಗೆ 10-30ಕ್ಕೆ ಶ್ರೀ ಕೃಷ್ಣ ಜನ್ಮಮಹೋತ್ಸವ ಸಮಿತಿ (ರಿ.) ಕದ್ರಿ ಇವರ ವೇದಿಕೆ ಮತ್ತು ಸಹಯೋಗದೊಂದಿಗೆ ಕದ್ರಿ ದೇವಸ್ಥಾನದಲ್ಲಿ ನಡೆಯಲಿದೆ.
ಯಕ್ಷಗಾನದಲ್ಲಿ ನಾನಾ ಭಾಷೆಗಳಲ್ಲಿ ಮನೋಜ್ಞವಾಗಿ ನಟಿಸಬಲ್ಲ ಸಹೃದಯೀ ಕಲಾವಿದ ಪಿ. ನಾಗೇಶ ಕಾರಂತ ಇವರಿಗೆ ಪರಮೇಶ್ ರವರ ನೆನಪಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಈ ಕಾರ್ಯಕ್ರಮವನ್ನು ಸರಯೂ ತಂಡ ನಿರ್ವಹಿಸಲಿದ್ದು, ಪ್ರಶಸ್ತಿ ಪ್ರದಾನದ ಬಳಿಕ ಸರಯೂ ಬಾಲ ಯಕ್ಷ ವೃಂದ (ರಿ.) ಮಕ್ಕಳ ಮೇಳದಿಂದ ‘ಶ್ರೀಕೃಷ್ಣ ಕಾರುಣ್ಯ’ ಎಂಬ ಯಕ್ಷಗಾನ ಬಯಲಾಟವೂ ನಡೆಯಲಿದೆ ಎಂದು ಸರಯೂ ತಂಡದ ಗೌರವ ಸಂಚಾಲಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹಾಗೂ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ.