ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರು ಕಥೊಲಿಕ್ ಸಭಾ ಮಂಗಳೂರು (ರಿ.) ಸುರತ್ಕಲ್ ಘಟಕದ ಸಹಯೋಗದೊಂದಿಗೆ ಆಯೋಜಿಸುವ ವೊವಿಯೊ ವೇರ್ಸ್ ಬಾಳ್ ಗಿತಾಂ ಕಾರ್ಯಾಗಾರವು (ಮದುವೆ ಸೋಭಾಣೆ ಮತ್ತು ಶಿಶು ಗೀತೆಗಳು) ದಿನಾಂಕ 14 ಸೆಪ್ಟೆಂಬರ್ 2025ರ ಭಾನುವಾರದಂದು ಬೆಳಗ್ಗೆ ಘಂಟೆ 9.30ಕ್ಕೆ ಸುರತ್ಕಲ್ಲಿನ ಸೆಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಲಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸೆಕ್ರೆಡ್ ಹಾರ್ಟ್ ಚರ್ಚ್ ಸುರತ್ಕಲ್ ಇಲ್ಲಿನ ಧರ್ಮಗುರುಗಳಾದ ಆ. ವಂ. ಅಸ್ಟಿನ್ ಪೀಟರ್ ಪೆರಿಸ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ. ಆರ್. ಪಿ. ಎಲ್. ಇದರ ಗ್ರೂಪ್ ಜನರಲ್ ಮೆನೇಜರ್ ಆದ ಶ್ರೀ ಕೃಷ್ಣಾ ಹೆಗ್ಡೆ, ಕೆಥೋಲಿಕ್ ಸಭಾ ಸುರತ್ಕಲ್ ಘಟಕದ ಅಧ್ಯಕ್ಷರಾದ ಶ್ರೀ ಒಲ್ವಿನ ಡಿ’ಸೋಜ, ಕೆಥೋಲಿಕ್ ಸಭಾ ಸುರತ್ಕಲ್ ವಲಯದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿ’ಸೋಜ ಹಾಗೂ ಸುರತ್ಕಲ್ ಚರ್ಚ್ ಇದರ ಉಪಾಧ್ಯಕ್ಷರಾದ ಶ್ರೀ ರಸ್ಸೆಲ್ ರೋಜ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿಲ್ಡಾ ಮೊರಾಸ್, ಜೇಮ್ಸ್ ಡಿ’ಸೋಜ, ರೀನ ಡಿ’ಸೋಜ, ವೀಣಾ ಪಿರೇರಾ, ಗ್ಲ್ಯಾಡಿ ಸ್ ಡಿ’ಸೋಜ ಭಾಗವಹಿಸಲಿದ್ದಾರೆ.